ಈದ್ ಉಲ್ ಫಿತ್ರ್: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ

ಪ್ರಧಾನಿ ಮೋದಿ, ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ : ಈದ್ ಉಲ್ ಫಿತ್ರ್ ಹಿನ್ನೆಲೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಭಾಶಯವನ್ನು ಕೋರಿದರು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಈದ್ ಉಲ್ ಫಿತ್ರ್ ಶುಭಾಶಯಗಳು. ಈ ಹಬ್ಬವು ನಮ್ಮ ಸಮಾಜದಲ್ಲಿ ಭರವಸೆ, ಸಾಮರಸ್ಯ ಮತ್ತು ದಯೆಯ ಮನೋಭಾವವನ್ನು ಹೆಚ್ಚಿಸಲಿ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಸಂತೋಷ ಮತ್ತು ಯಶಸ್ಸು ಸಿಗಲಿ, ಈದ್ ಮುಬಾರಕ್ ಎಂದು ಬರೆದುಕೊಂಡಿದ್ದಾರೆ.
Greetings on Eid-ul-Fitr.
— Narendra Modi (@narendramodi) March 31, 2025
May this festival enhance the spirit of hope, harmony and kindness in our society. May there be joy and success in all your endeavours.
Eid Mubarak!
Eid Mubarak!
— Rahul Gandhi (@RahulGandhi) March 31, 2025
May this joyous occasion bring peace, happiness, prosperity, and good health to you and your loved ones. pic.twitter.com/NQEwFUJPGP
ಈದ್ ಹಿನ್ನಲೆ ಶುಭಕೋರಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ಈ ಸಂತೋಷದಾಯಕ ಸಂದರ್ಭ ನಿಮಗೆ, ನಿಮ್ಮ ಪ್ರೀತಿ ಪಾತ್ರರಿಗೆ ಶಾಂತಿ, ಸಂತೋಷ, ಸಮೃದ್ಧಿ, ಉತ್ತಮ ಆರೋಗ್ಯ ತರಲಿ ಎಂದು ಹಾರೈಸಿದರು.