ಕೆಲಸದ ಒತ್ತಡದಿಂದ ಮೃತಪಟ್ಟ ಉದ್ಯೋಗಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸದ್ದಕ್ಕೆ ವಿಷಾದ ವ್ಯಕ್ತಪಡಿಸಿದ EY ಅಧ್ಯಕ್ಷ

Update: 2024-09-20 06:52 GMT

ರಾಜೀವ್ ಮೆಮಾನಿ ((linkedin) / ಅನ್ನಾ ಸೆಬಾಸ್ಟಿಯನ್ ಪೆರೈಲ್ (India Today)

ಹೊಸದಿಲ್ಲಿ: ಅತಿಯಾದ ಕೆಲಸದ ಒತ್ತಡದಿಂದ ಮೃತಪಟ್ಟ ತನ್ನ ಉದ್ಯೋಗಿಯ ಅಂತ್ಯಕ್ರಿಯೆಯಲ್ಲಿ ಕಂಪೆನಿಯಿಂದ ಯಾರೂ ಭಾಗವಹಿಸದಿದ್ದಕ್ಕಾಗಿ Ernst and Young ಇಂಡಿಯಾ ಅಧ್ಯಕ್ಷ ರಾಜೀವ್ ಮೆಮಾನಿ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಸಂಸ್ಕೃತಿಯಲ್ಲ ಎಂದು ಅವರು ತಿಳಿಸಿದ್ದಾರೆ.

ಅತಿಯಾದ ಕೆಲಸದ ಒತ್ತಡಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆ ಎದುರಿಸುತ್ತಿರುವ ಮೆಮಾನಿ, ಅನ್ನಾ ಸೆಬಾಸ್ಟಿಯನ್ ಪೆರೈಲ್ ಅವರ ದುರಂತ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ ಎಂದು ಲಿಂಕ್ಡ್‌ ಇನ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

"ನಾನು ಮೃತ ಉದ್ಯೋಗಿಯ ಕುಟುಂಬಕ್ಕೆ ನನ್ನ ಸಂತಾಪವನ್ನು ತಿಳಿಸಿದ್ದೇನೆ. ಅವರ ಕುಟುಂಬಕ್ಕೆ ಉಂಟಾದ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಅನ್ನಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದೇ ಇರುವುದಕ್ಕೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾದುದು. ಇದು ಹಿಂದೆಂದೂ ಸಂಭವಿಸಿಲ್ಲ. ಮತ್ತೆಂದೂ ಸಂಭವಿಸುವುದಿಲ್ಲ" ಎಂದು ಮೆಮಾನಿ ಹೇಳಿದ್ದಾರೆ.

ಮೆಮಾನಿ ಅವರು ಕೆಲಸದ ಸ್ಥಳದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ. ಅದು ನಮ್ಮ ಮುಂದಿನ ಗುರಿ ಎಂದು ಒತ್ತಿ ಹೇಳಿದ್ದಾರೆ.

ಮಾರ್ಚ್‌ನಲ್ಲಿ E&Y ಗೆ ಕೆಲಸಕ್ಕೆ ಸೇರಿದ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್, ಜುಲೈ 20 ರಂದು ನಿಧನರಾದರು. ಈ ವಾರದ ಆರಂಭದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಅನ್ನಾ ಕೆಲಸದ ಒತ್ತಡಕ್ಕೆ ಬಲಿಯಾಗಿದ್ದಾರೆ ಎಂದು ಆರೋಪಿಸಿ ಅವರ ತಾಯಿ ಅನಿತಾ ಅಗಸ್ಟಿನ್ ಕಂಪನಿಗೆ ಬರೆದ ಬಹಿರಂಗ ಪತ್ರ ವೈರಲ್ ಆಗಿತ್ತು.

ತನ್ನ ಮಗಳ ಅಂತ್ಯಕ್ರಿಯೆಯಲ್ಲಿ ಕಂಪನಿಯಿಂದ ಯಾರೂ ಭಾಗವಹಿಸಲಿಲ್ಲ ಎಂದು ಅಗಸ್ಟಿನ್ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News