ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್

Update: 2024-09-20 06:34 GMT

ಹೊಸದಿಲ್ಲಿ : ಭಾರತದ ಸುಪ್ರೀಂ ಕೋರ್ಟ್‌ನ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಲಾಗಿದೆ. ಕಲಾಪಗಳನ್ನು ವೀಕ್ಷಿಸಲು ಚಾನೆಲ್ ಗೆ ಭೇಟಿ ಕೊಟ್ಟರೆ ಅಮೆರಿಕದ Ripple Labs ಅಭಿವೃದ್ಧಿಪಡಿಸಿದ ಕ್ರಿಪ್ಟೋಕರೆನ್ಸಿ XRP ಪ್ರಚಾರ ಮಾಡುವ ವಿಡಿಯೋಗಳು ಕಂಡು ಬರುತ್ತಿದೆ.

ಸಂವಿಧಾನ ಪೀಠಗಳ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ವಿಷಯಗಳ ವಿಚಾರಣೆಗಳನ್ನು ಸ್ಟ್ರೀಮ್ ಮಾಡಲು ಸುಪ್ರೀಂ ಕೋರ್ಟ್ YouTube ಅನ್ನು ಬಳಸುತ್ತಿದೆ.

ಇತ್ತೀಚೆಗೆ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೇಲೆ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಗಳನ್ನು ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿತ್ತು.

ಹ್ಯಾಕರ್ ಗಳು ಈ ಹಿಂದೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿರುವ ಕಲಾಪಗಳ ವಿಡಿಯೋಗಳನ್ನು ಖಾಸಗಿ ಎಂದು ಮಾಡಿದ್ದು, ಅದು ಈಗ ಸಾರ್ವಜನಿಕರಿಗೆ ಲಭ್ಯವಿಲ್ಲ. ಚಾನೆಲ್ ವೀಕ್ಷಣೆ ಗೆ ಸಾಧ್ಯವಾಗಬೇಕಾದರೆ 2 ಬಿಲಿಯನ್ ಅಮೆರಿಕನ್ ಡಾಲರ್ ದಂಡ ಕಟ್ಟಿ ಎಂಬ ಸಂದೇಶ ಸ್ಕ್ರೀನ್ ಮೇಲೆ ಬರುತ್ತಿದೆ.

ಯೂಟ್ಯೂಬ್ ಚಾನೆಲ್‌ನ ಹ್ಯಾಕಿಂಗ್ ಬಗ್ಗೆ ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದೆ ಎಂದು ಅಧಿಕೃತ ಮೂಲಗಳು Bar and Bench ಗೆ ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News