ತಾಜ್‌ಮಹಲ್‌ಗೆ ಹುಸಿ ಬಾಂಬ್ ಬೆದರಿಕೆ
Update: 2024-12-03 15:44 GMT
ಆಗ್ರಾ : ವಿಶ್ವವಿಖ್ಯಾತ ತಾಜ್‌ಮಹಲ್‌ನ್ನು ಸ್ಫೋಟಿಸುವುದಾಗಿ ಇ-ಮೇಲ್ ಬೆದರಿಕೆಯೊಂದು ಮಂಗಳವಾರ ಇಲ್ಲಿಯ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ಕಚೇರಿಗೆ ಬಂದಿದ್ದು, ಪರಿಶೀಲನೆಯ ಬಳಿಕ ಅದು ಹುಸಿ ಬೆದರಿಕೆ ಎನ್ನುವುದು ಖಚಿತಪಟ್ಟಿದೆ ಎಂದು ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ಬಾಂಬ್ ನಿಷ್ಕಿಯ ದಳ, ಶ್ವಾನ ದಳ ಮತ್ತು ಇತರ ತಂಡಗಳನ್ನು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದ್ದು ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಲಿಲ್ಲ ಎಂದು ತಾಜ್‌ಮಹಲ್ ಭದ್ರತೆಯ ಹೊಣೆಯನ್ನು ಹೊತ್ತಿರುವ ಎಸಿಪಿ ಸೈಯದ್ ಅರೀಬ್ ಅಹ್ಮದ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಬಾಂಬ್ ಬೆದರಿಕೆ ಇ-ಮೇಲ್‌ನ್ನು ಮುಂದಿನ ಕ್ರಮಕ್ಕಾಗಿ ಆಗ್ರಾ ಪೋಲಿಸರಿಗೆ ಮತ್ತು ಆಗ್ರಾ ವಲಯ ಎಎಸ್‌ಐಗೆ ಸಲ್ಲಿಸಲಾಗಿದೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ದೀಪ್ತಿ ವತ್ಸ್ ಹೇಳಿದರು.