ಮಮತಾ ಬ್ಯಾನರ್ಜಿ UN ಪಾತ್ರದ ಬಗ್ಗೆ ಅರಿತುಕೊಂಡಿದ್ದಾರೆಯೇ? : ಶಶಿ ತರೂರ್
ಹೊಸದಿಲ್ಲಿ : ಬಾಂಗ್ಲಾದೇಶದಲ್ಲಿ ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಬಂಧನದ ಬಳಿಕ ಭುಗಿಲೆದ್ದ ಅಶಾಂತಿ ಬಗ್ಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ ಬಾಂಗ್ಲಾದೇಶಕ್ಕೆ ಯುಎನ್ ಶಾಂತಿಪಾಲಕರನ್ನು ಕಳುಹಿಸಬೇಕೆಂದು ಆಗ್ರಹಿಸಿದ್ದರು. ಈ ಕುರಿತು ಆಕ್ಷೇಪಿಸಿದ ಶಶಿ ತರೂರ್, ಮಮತಾ ಬ್ಯಾನರ್ಜಿ ವಿಶ್ವಸಂಸ್ಥೆಯ ಪಾತ್ರದ ಬಗ್ಗೆ ಅರಿತುಕೊಂಡಿದ್ದಾರೆಯೇ ಎಂಬುವುದು ನನಗೆ ಖಚಿತವಿಲ್ಲ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ಶಶಿ ತರೂರ್ ಅವರು ಯುಎನ್ ಶಾಂತಿಪಾಲಕರ ಪಾತ್ರವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆಯೇ ಎಂಬುವುದು ನನಗೆ ಖಚಿತವಿಲ್ಲ. ಯುಎನ್ ಶಾಂತಿಪಾಲನಾ ಸಮಿತಿಯಲ್ಲಿ ನಾನು ಹಲವು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಯಾವುದೇ ದೇಶದ ವಿನಂತಿಯನ್ನು ಹೊರತುಪಡಿಸಿ ಯುಎನ್ ಶಾಂತಿಪಾಲಕರನ್ನು ಯಾವುದೇ ದೇಶದೊಳಗೆ ಬಹಳ ವಿರಳವಾಗಿ ಕಳುಹಿಸಲಾಗುತ್ತದೆ ಎಂದು ನಾನು ನಿಮಗೆ ಹೇಳಬಲ್ಲೆ. ಒಂದು ದೇಶದ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟರೆ ಮಾತ್ರ ಶಾಂತಿಪಾಲಕರನ್ನು ಕಳುಹಿಸಲಾಗುತ್ತದೆ. ಅದೂ ಕೂಡ ದೇಶದ ಸರ್ಕಾರ ಮನವಿ ಸಲ್ಲಿಸಬೇಕು ಎಂದು ಶಶಿ ತರೂರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಕೇಂದ್ರದ ಮಧ್ಯಸ್ಥಿಕೆಯನ್ನು ಕೋರಿದ್ದಾರೆ. ಸರ್ಕಾರವು ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡಬೇಕು. ಆ ಮೂಲಕ ಶಾಂತಿಪಾಲಕರನ್ನು ಅಲ್ಲಿಗೆ ಕಳುಹಿಸಬಹುದಾಗಿದೆ ಎಂದು ಹೇಳಿದ್ದರು.