ನಾಗ್ಪುರ ಹಿಂಸಾಚಾರ: ಯುಎಪಿಎ ಪ್ರಕರಣದಲ್ಲಿ ಬಂಧಿತ ಆರೋಪಿಯ ಮನೆ ಧ್ವಂಸಗೊಳಿಸಿದ ಅಧಿಕಾರಿಗಳು

Screengrab: X/@ians_india
ಮುಂಬೈ: ನಾಗ್ಪುರ ಕೋಮು ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಬುಲ್ಡೋಜರ್ ಬಳಸಿ ಕ್ರಮ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಅಧಿಕಾರಿಗಳು ಯಶೋಧರ ನಗರದ ಸಂಜಯ್ ಬಾಗ್ ಕಾಲೋನಿಯಲ್ಲಿರುವ ಫಾಹೀಮ್ ಖಾನ್ ಅವರ ಎರಡು ಅಂತಸ್ತಿನ ಮನೆಯ ಭಾಗಗಳನ್ನು ಕೆಡವಲು ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಾರ್ಚ್ 17 ರಂದು ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಸ್ಥಳೀಯ ರಾಜಕೀಯ ನಾಯಕ ಫಾಹೀಮ್ ಖಾನ್ ಮನೆಯ ಮೇಲೆ ನಾಗ್ಪುರದಲ್ಲಿ ಅಧಿಕಾರಿಗಳು ಬುಲ್ಡೋಜರ್ ಬಳಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಾಲೆಗಾಂವ್‌ನ ಸ್ಥಳೀಯ ರಾಜಕಾರಣಿಯಾಗಿರುವ ಫಾಹೀಮ್ ಖಾನ್ ಅವರನ್ನು ಕಳೆದ ವಾರ ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. ಇದೀಗ, ಅನಧಿಕೃತ ನಿರ್ಮಾಣ ಆರೋಪಿಸಿ ಅವರ ನಿವಾಸವನ್ನು ಭಾಗಶಃ ಕೆಡವಲಾಗುತ್ತಿದೆ.
ಭಾರೀ ಪೊಲೀಸ್ ಪಡೆಯೊಂದಿಗೆ ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಅಧಿಕಾರಿಗಳು, ಖಾನ್ ಅವರ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾದ ಮನೆಯ ಭಾಗವನ್ನು ಕೆಡವಿದ್ದಾರೆ.
ಮಾರ್ಚ್ 17 ರಂದು ಛತ್ರಪತಿ ಸಂಭಾಜಿನಗರದಲ್ಲಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಧಾರ್ಮಿಕ ಶಾಸನಗಳನ್ನು ಹೊಂದಿರುವ 'ಚಾದರ್' ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಗಳು ಹರಡಿದ ನಂತರ ಹಿಂಸಾಚಾರ ಭುಗಿಲೆದ್ದಿತ್ತು.
ಫಾಹೀಮ್ ಖಾನ್ ಅವರನ್ನು ಕಳೆದ ವಾರ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಮತ್ತು ಕ್ರಿಮಿನಲ್ ಪಿತೂರಿಯಲ್ಲಿ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿತ್ತು.
Nagpur, Maharashtra: Authorities have begun bulldozing the house of Fahim Khan, the main accused and mastermind behind the March 17 violence, following the CM Devendra Fadnavis's directive pic.twitter.com/fRbRPp0YVH
— IANS (@ians_india) March 24, 2025