ಕೇರಳ | ವಸ್ತ್ರ ಸಂಹಿತೆ ವಿರೋಧಿಸಿ ಪ್ರತಿಭಟನೆ; ಅಂಗಿ ಧರಿಸಿ ದೇವಾಲಯ ಪ್ರವೇಶಿಸಿದ ಗುಂಪು
Update: 2025-03-24 16:21 IST

Photo credit: newindianexpress.com
ಪತ್ತನಂತಿಟ್ಟ: ಇಲ್ಲಿನ ಅಯ್ಯಪ್ಪ ದೇವಾಲಯಕ್ಕೆ ಜನರ ಗುಂಪೊಂದು ತಮ್ಮ ಅಂಗಿ ತೆಗೆಯದೆ ಪ್ರವೇಶಿಸಿತು. ಆ ಮೂಲಕ ದೇವಾಲಯ ಪ್ರವೇಶಿಸುವ ಮೊದಲು ಪುರುಷರು ಬಟ್ಟೆ ಕಳಚಬೇಕು ಎನ್ನುವ ದೀರ್ಘಕಾಲದ ಪದ್ಧತಿಯನ್ನು ವಿರೋಧಿಸಿ ರವಿವಾರ ಪ್ರತಿಭಟನೆ ನಡೆಸಿದರು.
ತಿರುವಾಂಕೂರು ದೇವಸ್ವಂ ಮಂಡಳಿಯ ನಿರ್ವಹಣೆ ಮಾಡುವ ಪೆರುನಾಡುವಿನ ದೇವಾಲಯದ ಮುಂದೆ ಎಸ್‌ಎನ್‌ಡಿಪಿ ಸಂಯುಕ್ತ ಸಮರ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದರು. ಅವರು ಸರತಿ ಸಾಲಿನಲ್ಲಿ ನಿಂತು ತಮ್ಮ ಅಂಗಿ ತೆಗೆಯದೆ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡು ಬಂತು.
ಪೊಲೀಸರು ಅಥವಾ ದೇವಾಲಯ ಆಡಳಿತ ಮಂಡಳಿಯು ಆಕ್ಷೇಪ ವ್ಯಕ್ತಪಡಿಸಲಿಲ್ಲ. ಪ್ರತಿಭಟನೆ ಯಾವುದೇ ಅಹಿತಕರ ಘಟನೆಯಿಲ್ಲದೆ ಶಾಂತವಾಗಿ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪುರುಷರು ಅಂಗಿ ತೆಗೆಯುವಂತೆ ಕಡ್ಡಾಯಗೊಳಿಸುವ ಪದ್ಧತಿಯನ್ನು ಶಾಶ್ವತವಾಗಿ ಕೊನೆಗೊಳಿಸಬೇಕೆಂದು ಒತ್ತಾಯಿಸಿದರು.