2018-19ರಿಂದ 2022-23ರ ನಡುವೆ 500 ರೂ. ನಕಲಿ ನೋಟುಗಳ ಸಂಖ್ಯೆಯಲ್ಲಿ ಶೇ.317 ಏರಿಕೆ: ಕೇಂದ್ರದ ದತ್ತಾಂಶ

Update: 2024-11-27 09:23 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ, ನ.26: 2018-19 ಹಾಗೂ 2022 -23ನೇ ಸಾಲಿನ ನಡುವೆ ಪತ್ತೆಹಚ್ಚಲಾದ 500 ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯಲ್ಲಿ ಶೇ.317ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರಕಾರವು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ದತ್ತಾಂಶಗಳು ಬಹಿರಂಗಪಡಿಸಿವೆ.

2018-19ನೇ ಸಾಲಿನಲ್ಲಿ 500 ರೂ. ಮುಖಬೆಲೆಯ 2,186.5 ಕೋಟಿ ನಕಲಿ ನೋಟುಗಳು ಪತ್ತೆಯಾಗಿವೆ ಎಂದು ಕೇಂದ್ರ ಸಹಾಯಕ ವಿತ್ತ ಸಚಿವ ಪಂಕಜ್ಚೌಧರಿ ಅವರು ಲೋಕಸಭೆಗೆ ತಿಳಿಸಿದರು. ಇದಕ್ಕೆ ಹೋಲಿಸಿದರೆ 2022-23ನೇ ಸಾಲಿನಲ್ಲಿ 500 ರೂ. ಮುಖಬೆಲೆಯ 9,111 ಕೋಟಿ ನಕಲಿ ನೋಟುಗಳು ಪತ್ತೆಯಾಗಿದ್ದು, 316.6 ಶೇಕಡದಷ್ಟು ಹೆಚ್ಚಳವಾಗಿದೆ.

ಆದರೆ 2023-24ನೇ ಸಾಲಿನಲ್ಲಿ 500 ರೂ.ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯು 85,711ಕ್ಕೆ ಕುಸಿದಿದೆ ಎಂದು ಸಚಿವಾಲಯ ತಿಳಿಸಿದೆ.

ಡಿಎಂಕೆ ಸಂಸದ ಟಿ.ಎಂ.ಸೆಲ್ವಗಣಪತಿ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಹಣಕಾಸು ಸಚಿವಾಲಯವು ಈ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News