ಕೇರಳದಲ್ಲಿ ಐದು ʼವೆಸ್ಟ್ ನೈಲ್ʼ ಜ್ವರ ಪ್ರಕರಣಗಳು ದೃಢ

Update: 2024-05-07 09:14 GMT

PC : bfhd.wa.gov

ಕೋಝಿಕ್ಕೋಡ್: ಕೇರಳದ ಉತ್ತರ ಜಿಲ್ಲೆಯಾದ ಕೋಝಿಕ್ಕೋಡ್‌ನಲ್ಲಿ ಐದು ವೆಸ್ಟ್ ನೈಲ್ ಜ್ವರ ಪ್ರಕರಣಗಳನ್ನು ಆರೋಗ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

ಸೋಂಕಿಗೆ ಗುರಿಯಾಗಿದ್ದ ಮಕ್ಕಳೂ ಸೇರಿದಂತೆ ಎಲ್ಲರೂ ಚೇತರಿಸಿಕೊಂಡು ತಮ್ಮ ನಿವಾಸಗಳಿಗೆ ಮರಳಿದ್ದು, ಅವರಿರುವ ಪ್ರದೇಶಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಓರ್ವ ವ್ಯಕ್ತಿ ಸೋಂಕಿತನಾಗಿದ್ದಾನೆ ಎಂದು ಶಂಕಿಸಲಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರೋಗದ ಲಕ್ಷಣ ಕಂಡು ಬಂದಿರುವ ಹಾಗೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ರಕ್ತದ ಮಾದರಿಗಳನ್ನು ಪುಣೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳಿಸಿಕೊಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಇದೀಗ ಪರೀಕ್ಷಾ ಫಲಿತಾಂಶ ಬಂದಿದ್ದು, ಅವರೆಲ್ಲರೂ ʼವೆಸ್ಟ್ ನೈಲ್ʼ ಜ್ವರದಿಂದ ಬಳಲುತ್ತಿರುವುದು ದೃಢಪಟ್ಟಿದೆ. ಅವರೆಲ್ಲರೂ ಈಗ ಚೇತರಿಸಿಕೊಂಡಿದ್ದಾರೆ" ಎಂದೂ ಅವರು ಹೇಳಿದ್ದಾರೆ.

1937ರಲ್ಲಿ ಉಗಾಂಡದಲ್ಲಿ ಪತ್ತೆಯಾದ ಕ್ಯೂಲೆಕ್ಸ್ ಪ್ರಭೇದದ ಸೊಳ್ಳೆಗಳು ಪಶ್ಚಿಮ ನೈಲ್ ಜ್ವರ ಹರಡುವಿಕೆಗೆ ಕಾರಣವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News