ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಮಾಜಿ ಶಾಸಕಿ ಸತ್ಕರ್ ಕೌರ್ ಬಂಧನ: ಬಿಜೆಪಿಯಿಂದ ಉಚ್ಚಾಟನೆ

Update: 2024-10-25 11:24 GMT

ಮಾಜಿ ಶಾಸಕಿ ಸತ್ಕರ್ ಕೌರ್ | PC : X

ಚಂಡೀಗಢ: ಮಾದಕ ವಸ್ತು ಪ್ರಕರಣದಲ್ಲಿ ಮಾಜಿ ಶಾಸಕಿ ಸತ್ಕರ್ ಕೌರ್ ಬಂಧನವಾದ ಬೆನ್ನಿಗೇ, ಅವರನ್ನು ಪಂಜಾಬ್ ಬಿಜೆಪಿ ಘಟಕ ಪಕ್ಷದಿಂದ ಉಚ್ಚಾಟಿಸಿದೆ.

ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷ ಸುನೀಲ್ ಜತ್ಕರ್ ನಿರ್ದೇಶನದ ಮೇರೆಗೆ ಕೌರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಗುರುವಾರ ಪಂಜಾಬ್ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಅನಿಲ್ ಸರೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊಹಾಲಿಯ ಖರಾರ್ ನಲ್ಲಿ 100ಕ್ಕೂ ಹೆಚ್ಚು ಗ್ರಾಂ ತೂಕದ ಹೆರಾಯಿನ್ ಅನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪದ ಮೇಲೆ ಬುಧವಾರ ಮಾಜಿ ಕಾಂಗ್ರೆಸ್ ಶಾಸಕಿಯಾದ ಸತ್ಕರ್ ಕೌರ್ ಹಾಗೂ ಅವರ ಸೋದರ ಸಂಬಂಧಿ ಜಸ್ಕೀರತ್ ಸಿಂಗ್ ರನ್ನು ಪೊಲೀಸರು ಬಂಧಿಸಿದ್ದರು.

ಮಾಜಿ ಶಾಸಕಿ ಕೌರ್ ಹಾಗೂ ಅವರ ಸೋದರ ಸಂಬಂಧಿಯಿಂದ ಒಟ್ಟು 128 ಗ್ರಾಂ ತೂಕದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2017ರಿಂದ 2022ರವರೆಗೆ ಫಿರೋಝ್ ಪುರ್ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಸತ್ಕರ್ ಕೌರ್ ಪ್ರತಿನಿಧಿಸಿದ್ದರು. ಆದರೆ, 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ, ಬಿಜೆಪಿ ಸೇರ್ಪಡೆಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News