ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿದ್ದ ಹೋರಾಟಗಾರ ಗೌತಮ್ ನವ್ಲಾಖ ಬಿಡುಗಡೆ
ಹೊಸದಿಲ್ಲಿ: ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ವಶದಲ್ಲಿದ್ದ ಗೌತಮ್ ನವ್‍ಲಖಾ ಅವರನ್ನು ನವಿ ಮುಂಬೈನಲ್ಲಿ ಶನಿವಾರ ರಾತ್ರಿ ಬಿಡುಗಡೆ ಮಾಡಲಾಗಿದೆ. ಅವರನ್ನು ನವಿಮುಂಬೈನಲ್ಲಿರುವ ಅವರ ನಿವಾಸದಲ್ಲಿ ಗೃಹಬಂಧನದಲ್ಲಿ ಇಡಲಾಗಿತ್ತು.
ಮಾನವಹಕ್ಕುಗಳ ಹೋರಾಟಗಾರ ನವ್ಲಾಖ ಅವರಿಗೆ ನೀಡಿದ್ದ ಜಾಮೀನಿಗೆ ನೀಡಿದ್ದ ತಡೆಯನ್ನು ಸುಪ್ರೀಂಕೋರ್ಟ್ ಮೇ 14ರಂದು ತೆರವುಗೊಳಿಸಿತ್ತು.
ಹಿರಿಯ ವಕೀಲರಾದ ನಿತ್ಯಾ ರಾಮಕೃಷ್ಣನ್ ಅವರು ನವ್ಲಾಖ ಪರವಾಗಿ ಹಾಜರಿದ್ದರೆ, ರಾಷ್ಟ್ರೀಯ ತನಿಖಾ ಸಂಸ್ಥೆ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಎಸ್.ವಿ,ರಾಜು ಪಾಲ್ಗೊಂಡಿದ್ದರು.
ಕಳೆದ ಡಿಸೆಂಬರ್ 19ರಂದು ಮುಂಬೈ ಹೈಕೋರ್ಟ್, ನವ್‍ಲಖಾ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ತನ್ನ ತೀರ್ಪಿಗೆ ಮೂರು ವಾರ ತಡೆಯಾಜ್ಞೆ ನೀಡಿತ್ತು.
2020ರ ಎಪ್ರಿಲ್ 14ರಂದು ನವ್‍ಲಖಾ ಅವರನ್ನು ಬಂಧಿಸಲಾಗಿತ್ತು. 2022ರ ನವೆಂಬರ್ 19ರಿಂದ ಅವರನ್ನು ಗೃಹಬಂಧನದಲ್ಲಿ ಇಡಲಾಗಿತ್ತು.