ಚಿನ್ನ ಬಲು ದುಬಾರಿ | 10 ಗ್ರಾಂ ಚಿನ್ನಕ್ಕೆ 91 ಸಾವಿರ ರೂ.!

Update: 2025-04-01 16:17 IST
ಚಿನ್ನ ಬಲು ದುಬಾರಿ | 10 ಗ್ರಾಂ ಚಿನ್ನಕ್ಕೆ 91 ಸಾವಿರ ರೂ.!

ಸಾಂದರ್ಭಿಕ ಚಿತ್ರ (credit: Grok)

  • whatsapp icon

ಹೊಸದಿಲ್ಲಿ: ಹಳದಿ ಲೋಹದ ದರ ಮಂಗಳವಾರ ಮತ್ತೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರೆಟ್ ಚಿನ್ನ ಒಂದು ಗ್ರಾಂ.ಗೆ ದರ 8,510ರೂ.ನಂತೆ ಮಾರಾಟವಾಗಿದೆ. ಅದರಂತೆ ಒಂದು ಪವನ್ ಅಂದರೆ 8ಗ್ರಾಂ. ಚಿನ್ನ 68,810ರೂ.ಗೆ ಮಾರಾಟವಾಗಿದೆ ಎಂದು ವರ್ತಕರು ಮಾಹಿತಿ ನೀಡಿದರು.

24 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 9935.5 ರಂತೆ ಮಾರಾಟವಾಗಿದೆ. ಅದರಂತೆ 10 ಗ್ರಾಂ ಅಪ್ಪಟ ಚಿನ್ನವು 91935 ರೂ.ಗೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದರ ಏರಿಕೆ ಕಂಡಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ನೀತಿಗಳು ಚಿನ್ನದ ದರ ಏರಿಕೆಗೆ ಕಾರಣ ಎಂದು ಚಿನಿವಾರ ಪೇಟೆಯಲ್ಲಿ ವಿಶ್ಲೇಶಿಸಲಾಗುತ್ತಿದೆ.

ಮಂಗಳವಾರ ದಿಲ್ಲಿಯಲ್ಲಿ ಪ್ರತಿ 8 ಗ್ರಾಂ 24 ಕ್ಯಾರೆಟ್ ಚಿನ್ನದ ದರ 62,128 ರೂ. ಇದ್ದರೆ, ಪ್ರತಿ 8 ಗ್ರಾಂ ಆಭರಣ ಚಿನ್ನ(22 ಕ್ಯಾರೆಟ್)ದ ದರ 58,224 ರೂ.ಗೆ ಏರಿಕೆಯಾಗಿದೆ.

ಮುಂಬೈನಲ್ಲಿ ಪ್ರತಿ 8 ಗ್ರಾಂ 24 ಕ್ಯಾರೆಟ್ ಚಿನ್ನದ ದರ 60,552 ರೂ.ಗೆ ತಲುಪಿದ್ದರೆ, 22 ಕ್ಯಾರೆಟ್ ನ ಆಭರಣ ಚಿನ್ನದ ಬೆಲೆ 56,832 ರೂ.ಗೆ ಏರಿಕೆ ಕಂಡಿದೆ.

ಚೆನ್ನೈನಲ್ಲಿ ಪ್ರತಿ 8 ಗ್ರಾಂ 24 ಕ್ಯಾರೆಟ್ ಚಿನ್ನದ ದರ 60,736 ರೂ.ಗೆ ಜಿಗಿದಿದ್ದರೆ, ಪ್ರತಿ 8 ಗ್ರಾಂ 22 ಕ್ಯಾರೆಟ್ ಚಿನ್ನದ ದರ 56,936 ರೂ.ಗೆ ತಲುಪಿದೆ.

ಹೈದರಾಬಾದ್ ನಲ್ಲಿ ಪ್ರತಿ 8 ಗ್ರಾಂ 24 ಕ್ಯಾರೆಟ್ ಚಿನ್ನದ ದರ 60,976 ರೂ.ಗೆ ಏರಿಕೆ ಕಂಡಿದ್ದರೆ, ಪ್ರತಿ 8 ಗ್ರಾಂ 22 ಕ್ಯಾರೆಟ್ ಚಿನ್ನದ ದರ 57,224 ರೂ. ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News