ಲೋಕೋ ಪೈಲಟ್‌ ಇಲ್ಲದೆ 70 ಕಿಮೀ ಸಂಚರಿಸಿದ ಗೂಡ್ಸ್‌ ರೈಲು: ತಪ್ಪಿದ ಭಾರೀ ಅನಾಹುತ

Update: 2024-02-25 07:03 GMT

Screengrab:X/@ndtv

ಪಠಾಣ್‌ಕೋಟ್: ಪಂಜಾಬ್‌ನಲ್ಲಿ ಇಂದು ಗೂಡ್ಸ್ ರೈಲೊಂದು ಚಾಲಕನಿಲ್ಲದೇ ಹಳಿಗಳ ಮೇಲೆ ಸುಮಾರು 70 ಕಿಲೋಮೀಟರ್‌ಗಳವರೆಗೆ ಓಡಿದೆ.

ಪಠಾಣ್‌ಕೋಟ್ ನಿಲ್ದಾಣದಲ್ಲಿ ರೈಲಿನಿಂದ ಇಳಿಯುವ ಮೊದಲು ಚಾಲಕ ಹ್ಯಾಂಡ್ ಬ್ರೇಕ್ ಅನ್ನು ಎಳೆಯಲು ಮರೆತಿರುವುದರಿಂದ ಈ ಪ್ರಮಾದ ನಡೆದಿದೆ. ಹ್ಯಾಂಡ್‌ ಬ್ರೇಕ್‌ ಹಾಕದ್ದರಿಂದಾಗಿ ಅದು ಇಳಿಜಾರು ಹಳಿಗಳ ಮೇಲೆ ಚಲಿಸಲು ಪ್ರಾರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲುಗಳನ್ನು ಹೊತ್ತುಕೊಂಡಿರುವ ಗೂಡ್ಸ್ ರೈಲನ್ನು ಉಚ್ಚಿ ಬಸ್ಸಿಯಲ್ಲಿ ತಡೆದು ನಿಲ್ಲಿಸಲಾಗಿದ್ದು, ಅದಕ್ಕೂ ಮುನ್ನ ಅದು ಸುಮಾರು ಐದು ನಿಲ್ದಾಣಗಳನ್ನು ದಾಟಿ ಚಲಿಸಿದೆ ಎಂದು ವರದಿಯಾಗಿದೆ. ರೈಲ್ವೇ ಅಧಿಕಾರಿಯೊಬ್ಬರು ರೈಲನ್ನು ನಿಲ್ಲಿಸಲು ಹಳಿಗಳ ಮೇಲೆ ಮರದ ದಿಮ್ಮಿಗಳನ್ನು ಹಾಕಿದ ನಂತರ ರೈಲನ್ನು ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಅಂತಹ ಯಾವುದೇ ಘಟನೆಗಳನ್ನು ತಪ್ಪಿಸಲು ಯಾವುದೇ ಸಂಭಾವ್ಯ ಸುರಕ್ಷತಾ ಲೋಪಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News