ಅಂಗಾಂಗಳ ಸುಗಮ ಸಾಗಾಣಿಕೆಗೆ ಕೇಂದ್ರದಿಂದ ಮಾರ್ಗಸೂಚಿ ಪ್ರಕಟ
ಹೊಸದಿಲ್ಲಿ : ವಿಮಾನ, ಆಕಾಶ, ರೈಲ್ವೆ ಹಾಗೂ ಜಲಮಾರ್ಗ ಸೇರಿದಂತೆ ವಿವಿಧ ಸಾರಿಗೆ ಮಾರ್ಗಗಳ ಮೂಲಕ ಮಾನವ ಅಂಗಾಂಗಗಳ ಅಬಾಧಿತ ಸಾಗಾಟಕ್ಕಾಗಿ ಕೇಂದ್ರ ಗೃಹ ಸಚಿವಾಲಯವು ಪ್ರಪ್ರಥಮ ಬಾರಿಗೆ ಪ್ರಮಾಣಿತ ಕಾರ್ಯನಿರ್ವಹಣಾ ಮಾರ್ಗಸೂಚಿ(ಎಸ್‌ಓಪಿ)ಗಳನ್ನು ಪ್ರಕಟಿಸಿದೆ.
ಈ ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನವು ದೇಶಾದ್ಯಂತ ಅಂಗಾಂಗಳ ಕಸಿಶಸ್ತ್ರಚಿಕಿತ್ಸೆಯಲ್ಲಿ ಒಳಗೊಳ್ಳುವವರಿಗೆ ಮಾರ್ಗದರ್ಶಿ ದಾಖಲೆಯಾಗಲಿದೆಯೆಂದು ಕೇಂದ್ರ ಸರಕಾರ ತಿಳಿಸಿದೆ.
ಮಾನವ ಅಂಗಾಂಗ ಸಾಗಣಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮೂಲಕ ಅಮೂಲ್ಯವಾದ ಅಂಗಾಂಗಗಳ ಬಳಕೆಯನ್ನು ಗರಿಷ್ಠಗೊಳಿಸುವ ಹಾಗೂ ಜೀವರಕ್ಷಕವಾದ ಅಂಗಾಂಗಳ ಕಸಿ ಶಸ್ತ್ರಕ್ರಿಯೆಯಾಗಿ ಎದುರುನೋಡುತ್ತಿರುವ ಅಸಂಖ್ಯಾತ ರೋಗಿಳಲ್ಲಿ ಈ ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನಗಳು ಆಶಾವಾದವನ್ನು ಮೂಡಿಸಲಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.
ಪ್ರಮಾಣಿತ ಕಾರ್ಯವಿಧಾನದ ಮುಖ್ಯಾಂಶಗಳು
► ಮಾನವನ ಮೃತದೇಹದ ಅಂಗಾಂಗಗಳನ್ನು ವಿಮಾನ ಮತ್ತಿತರ ವಾಯುಸಂಚಾರಿ ವಾಹನಗಳಲ್ಲಿ ಸಾಗಾಟ ಮಾಡಲು, ತಮ್ಮ ಏರ್‌ಕ್ರಾಫ್ಟ್‌ನ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್‌ಗೆ ಆದ್ಯತೆ ನೀಡುವಂತೆ ಹಾಗೂ ಮುಂಭಾಗದ ಆಸನಗಳ ಏರ್ಪಾಡುವ ಮಾಡುವಂತೆ ವಾಯುಸಂಚಾರ ನಿಯಂತ್ರಣ ಇಲಾಖೆಯನ್ನು ಕೋರಬಹುದಾಗಿದೆ.
► ಸೀಟು ಕಾದಿರಿಸುವಿಕೆಯಲ್ಲಿ ಆದ್ಯತೆ ನೀಡುವಂತೆ ಅಂಗಾಂಗಳನ್ನು ಸಾಗಾಟ ಮಾಡುವ ವೈದ್ಯಕೀಯ ಸಿಬ್ಬಂದಿ ಕೋರಬಹುದಾಗಿದೆ ಹಾಗೂ ತಡವಾಗಿ ಚೆಕ್ ಇನ್ ಆದರೂ ವಿಮಾನವೇರಲು ಅವಕಾಶ ನೀಡುವುದಕ್ಕೆ ನಿಯಮವನ್ನು ರೂಪಿಸಬೇಕು.
► ವಿಮಾನನಿಲ್ದಾಣದ ಮೂಲಗಳು ಆಂಗಾಂಗಗಳು ಆಗಮಿಸಲಿರುವ ಕುರಿತು ಗಮ್ಯ ವಿಮಾನನಿಲ್ದಾಣಕ್ಕೆ ಮಾಹಿತಿಯನ್ನು ನೀಡಬೇಕು.
► ಮಾನವ ಅಂಗಾಂಗಳು ಸಾಗಣೆಯಾಗುತ್ತಿದೆಯೆಂದು ವಿಮಾನದ ಕ್ಯಾಪ್ಟನ್ , ವಿಮಾನ ಹಾರಾಟದ ವೇಳೆ ಘೋಷಿಸಬಹುದಾಗಿದೆ.
► ವಿಮಾನನಿಲ್ದಾಣಕ್ಕೆ ಅಂಗಾಂಗ ಆಗಮಿಸಿದ ಕೂಡಲೇ ಅದು ಇರುವ ಪೆಟ್ಟಿಗೆಯನ್ನು ವಿಮಾನದಿಂದ ಆ್ಯಂಬುಲೆನ್ಸ್ ವರೆಗೆ ಕೊಂಡೊಯ್ಯಲು ಟ್ರಾಲಿಯ ಏರ್ಪಾಡು ಮಾಡಬೇಕಾಗುತ್ತದೆ.
► ಆ್ಯಂಬುಲೆನ್ಸ್ ಮತ್ತಿತರ ವಾಹನಗಳ ಮೂಲಕ ಅಂಗಾಂಗಗಳ ಸುಗಮ ಸಾಗಣಿಕೆಗೆ ‘ಹಸಿರು ಕಾರಿಡಾರ್’ ವ್ಯವಸ್ಥೆಯನ್ನು ಒದಗಿಸಬೇಕು.