ಜನಸಂದಣಿ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ ಗೂಳಿ: ಕನಿಷ್ಠ 15 ಮಂದಿಗೆ ಗಾಯ

Update: 2024-11-26 06:54 GMT

Photo credit: NDTV

ಲಕ್ನೋ: ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣದಲ್ಲಿ ದಾರಿತಪ್ಪಿದ ಗೂಳಿಯೊಂದು ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ್ದು, ಗೂಳಿ ದಾಳಿಯಲ್ಲಿ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ.

ಈ ಕುರಿತ ವೀಡಿಯೊ ವೈರಲ್ ಆಗಿದ್ದು, ದಾರಿತಪ್ಪಿದ ಗೂಳಿ ವ್ಯಕ್ತಿಯೋರ್ವನನ್ನು ಬೆನ್ನಟ್ಟುವುದು, ಕೊಂಬುಗಳಿಂದ ಮೇಲೆತ್ತಿ ಎಸೆಯುವುದು, ತಿವಿಯುವುದು ವೀಡಿಯೊದಲ್ಲಿ ಸೆರೆಯಾಗಿದೆ. ಗೂಳಿ ದಾಳಿಯಿಂದ ಆತನ ಕಣ್ಣಿಗೂ ಗಾಯವಾಗಿದೆ ಎಂದು ಹೇಳಲಾಗಿದೆ. ಗೂಳಿ ದಾಳಿಯಿಂದ ಗಾಯಗೊಂಡಿರುವುದು ಈತ ಮಾತ್ರವಲ್ಲ, 15ಕ್ಕೂ ಅಧಿಕ ಜನರ ಮೇಲೆ ಗೂಳಿ ದಾಳಿ ನಡೆಸಿ ಗಾಯಗೊಳಿಸಿದೆ.

ಗೂಳಿ ದಾಳಿಯಿಂದ ಆತಂಕಗೊಂಡ ಜನ ಮನೆ ಮತ್ತು ಅಂಗಡಿಗಳಿಂದ ಹೊರ ಬರಲು ಹಿಂದೇಟು ಹಾಕಿದ್ದಾರೆ. ಇದಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಲಾಲಾಬಾದ್ ನ ಪುರಸಭೆ ಗೂಳಿ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದೆ. ಮೂರು ಗಂಟೆಗಳ ಸತತ ಪ್ರಯತ್ನಗಳ ಬಳಿಕ ಗೂಳಿಯನ್ನು ಸೆರೆ ಹಿಡಿಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News