ಉದಯಪುರ ಅರಮನೆಯಲ್ಲಿ ಸಂಘರ್ಷ: ವಿವಾದಕ್ಕೆ ಕಾರಣವಾದ ಉತ್ತರಾಧಿಕಾರ
ಉದಯಪುರ: ಉದಯಪುರ ರಾಜಮನೆತನದ ಚಿತ್ತೋರ್ ಗಢ ಮತ್ತು ಉದಯಪುರ ಆಸ್ತಿಗಳ ಬಗೆಗಿನ ವಿವಾದದ ನಡುವೆಯೇ ದಿವಂಗತ ರಾಜ ಮಹೇಂದ್ರ ಸಿಂಗ್ ಮೇವಾರ್ ಅವರ ಹಿರಿಯ ಪುತ್ರ ನತದ್ವಾರ ಶಾಸಕ ವಿಶ್ವರಾಜ್ ಸಿಂಗ್ ಅವರ ಉತ್ತರಾಧಿಕಾರ ಸ್ವೀಕಾರ ಸಮಾರಂಭ ಸೋಮವಾರ ನಡೆಯಿತು.
ಮಹೇಂದ್ರ ಸಿಂಗ್ ಮೇವಾರ್ ಅವರ ತಮ್ಮ ಅರವಿಂದ್ ಸಿಂಗ್ ಮೇವಾರ್ ಅವರು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ನಗರದ ಅರಮನೆ ಮತ್ತು ಉತ್ತರಾಧಿಕಾರ ಸ್ವೀಕಾರ ಸಮಾರಂಭ ನಡೆಯಬೇಕಿದ್ದ ಏಕಲಿಂಗ ದೇವಸ್ಥಾನಕ್ಕೆ ಅಕ್ರಮ ಪ್ರವೇಶದ ವಿರುದ್ಧ ಎಚ್ಚರಿಕೆ ನೀಡಿದ್ದರಿಂದ ವಿವಾದ ಹುಟ್ಟಿಕೊಂಡಿತ್ತು. ಉತ್ತರಾಧಿಕಾರ ಸ್ವೀಕಾರ ಸಮಾರಂಭಕ್ಕೆ ಸಂಬಂಧಿಸಿದ ನಿರ್ದಿಷ್ಟ ವಿಧಿವಿಧಾನಗಳು ನಡೆಯಬೇಕಿದ್ದ ಉದಯಪುರ ನಗರದ ಅರಮನೆಯ ಪ್ರವೇಶದ್ವಾರಗಳನ್ನೂ ಮೇವಾರ್ ಮುಚ್ಚಿಸಿದ್ದರು.
ಸಮೋರ್ ಭಾಗ್ ಗೇಟ್ ಮುಚ್ಚಿದ ಬಗ್ಗೆ ಪ್ರತಿಭಟನೆ ಆರಂಭವಾಗಿದ್ದು, ಮಧ್ಯರಾತ್ರಿಯ ವರೆಗೂ ನಗರ ಅರಮನೆ ಮೈದಾನಕ್ಕೆ ವಿಶ್ವರಾಜ್ ಅವರ ಪ್ರವೇಶವನ್ನು ನಿರಾಕರಿಸಲಾಯಿತು. ಉಭಯ ಮುಖಂಡರ ಬೆಂಬಲಿಗರು ಪರಸ್ಪರ ಸಂಘರ್ಷಕ್ಕೆ ಇಳಿದಿದ್ದು, ತಡರಾತ್ರಿ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಕೆಲ ಪೊಲೀಸರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ. ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ವಿಶ್ವರಾಜ್ ಅವರ ಪ್ರವೇಶಕ್ಕೆ ಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡುವುದಾಗಿ ಜಿಲ್ಲಾಡಳಿತ ಪ್ರಕಟಿಸಿದೆ.
ಮಹೇಂದ್ರ ಸಿಂಗ್ ಮೇವಾರ್ (83) ಅವರು ಚಿತ್ತೋರ್ ಗಢ ಮಾಜಿ ಸಂಸದರಾಗಿದ್ದು, ಅಲ್ಪಕಾಲದ ಅಸ್ವಸ್ಥತೆ ಬಳಿಕ ನವೆಂಬರ್ 10ರಂದು ಕೊನೆಯುಸಿರೆಳೆದಿದ್ದರು. ಅವರ ಕುಟುಂಬ ಕಿರಿಯ ಸಹೋದರ (ತಮ್ಮ) ಅರವಿಂದ್ ಸಿಂಗ್ ಮೇವಾರ್ ಜತೆ ಸುಧೀರ್ಘಕಾಲದಿಂದ ಆಸ್ತಿ ವಿವಾದ ಹೊಂದಿದ್ದು, ವಿವಿಧ ಹಂತದ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ.
ಸಾರ್ವಜನಿಕ ನೋಟೀಸ್ ಮೂಲಕ ಸೋಮವಾರ, ಅರವಿಂದ್ ಸಿಂಗ್ ಸ್ಪಷ್ಟನೆ ನೀಡಿ, ಮಹೇಂದ್ರ ಸಿಂಗ್ ಅವರಿಗೆ ಆಸ್ತಿ ಉದಯಪುರದ ಕೊನೆಯ ರಾಜ ಹಾಗೂ ತಂದೆ ಭಗವತ್ ಸಿಂಗ್ ಅವರಿಂದ ಅನುವಂಶಿಕವಾಗಿ ಬಂದಿದೆ. ಆದರೆ ಉದಯಪುರ ನಗರ ಅರಮನೆ ಮತ್ತು ಏಕಲಿಂಗ ದೇವಸ್ಥಾನ ಅರವಿಂದ್ ಸಿಂಗ್ ನಿಯಂತ್ರಣದಲ್ಲಿತ್ತು ಎಂದು ಪ್ರತಿಪಾದಿಸಿದ್ದಾರೆ. 1984ರಲ್ಲಿ ಭಗವತ್ ಸಿಂಗ್ ಅವರು ಮಹೇಂದ್ರ ಜತೆಗಿನ ಸಂಬಂಧ ಕಡಿದುಕೊಂಡರು. ಆ ಬಳಿಕ ಕುಟುಂಬ ಆಸ್ತಿಯನ್ನು ಅರವಿಂದ್ ನೋಡಿಕೊಳ್ಳುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಮಹೇಂದ್ರ ಕುಟುಂಬ ಸಮೋರ್ ಬಾಗ್ ಬಳಿ ವಾಸವಿದೆ.