ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂಬ ನಂಬಿಕೆ ಇದೆ: ಪ್ರಧಾನಿ ಮೋದಿ

Update: 2024-08-15 05:48 GMT

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಶೀಘ್ರವೇ ಪರಿಸ್ಥಿತಿ ಸುಧಾರಿಸಲಿದೆ ಎಂದು ಗುರುವಾರ ಭರವಸೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಆ ದೇಶದಲ್ಲಿನ ಹಿಂದೂಗಳು ಹಾಗೂ ಅಲ್ಪಸಂಖ್ಯಾತರ ಸುರಕ್ಷತೆಯ ಕುರಿತು ಕಳವಳವನ್ನೂ ವ್ಯಕ್ತಪಡಿಸಿದರು.

ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿದ ಪ್ರಧಾನಿ ಮೋದಿ, ಭಾರತವು ಯಾವಾಗಲೂ ಬಾಂಗ್ಲಾದೇಶದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಬೆಂಬಲವಾಗಿರಲಿದೆ ಎಂದು ಭರವಸೆ ನೀಡಿದರು.

“ನೆರೆಯ ದೇಶಗಳು ಸಮೃದ್ಧತೆ ಹಾಗೂ ಶಾಂತಿಯ ಪಥದಲ್ಲಿ ಮುನ್ನಡೆಯುವುದನ್ನು ಭಾರತ ಬಯಸುತ್ತದೆ. ನಾವು ಶಾಂತಿಗೆ ಬದ್ಧರಾಗಿದ್ದೇವೆ” ಎಂದು ಅವರು ಹೇಳಿದರು.

ನೆರೆಯ ದೇಶವಾಗಿ ಬಾಂಗ್ಲಾದೇಶದಲ್ಲಿ ಆಗಿರುವುದರ ಕುರಿತು ಭಾರತ ಕಳವಳಗೊಂಡಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

“ನೆರೆಯ ದೇಶವಾಗಿ, ಬಾಂಗ್ಲಾದೇಶದಲ್ಲಿ ಆಗಿರುವುದರ ಕುರಿತು ವ್ಯಕ್ತವಾಗುತ್ತಿರುವ ಕಳವಳಗಳನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ಆದಷ್ಟೂ ಶೀಘ್ರವಾಗಿ ಅಲ್ಲಿನ ಪರಿಸ್ಥಿತಿ ಸುಧಾರಿಸಲಿದೆ ಎಂದು ನಾನು ಭಾವಿಸಿದ್ದೇನೆ” ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

ಬಾಂಗ್ಲಾದೇಶದ ಪ್ರಗತಿಯ ಪಯಣದಲ್ಲಿ ಅದಕ್ಕೆ ಒಳಿತಾಗಲಿ ಎಂದು ಆಶಿಸುವುದನ್ನು ನಾವು ಮುಂದುವರಿಸಲಿದ್ದೇವೆ” ಎಂದು ಮೋದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News