2019ರಲ್ಲಿ ಬಿಜೆಪಿ-ಎನ್ಸಿಪಿ ಮೈತ್ರಿ ಮಾತುಕತೆ ಆತಿಥ್ಯವನ್ನು ಅದಾನಿ ವಹಿಸಿದ್ದರು: ಶರದ್ ಪವಾರ್

Update: 2024-11-15 08:27 GMT

ಶರದ್ ಪವಾರ್ (Photo: PTI)

ಮುಂಬೈ: 2019ರಲ್ಲಿ ಬಿಜೆಪಿ ಹಾಗೂ ಶರದ್ ಪವಾರ್ ನೇತೃತ್ವದ ಅವಿಭಜಿತ ಎನ್ಸಿಪಿಯೊಂದಿಗೆ ನಡೆದಿದ್ದ ಮೈತ್ರಿ ಮಾತುಕತೆಯ ಸಂದರ್ಭದಲ್ಲಿ ಉದ್ಯಮಿ ಗೌತಮ್ ಅದಾನಿ ಹಾಜರಿದ್ದರು ಎಂದು ಅಜಿತ್ ಪವಾರ್ ಹೇಳಿಕೆ ನೀಡಿದ ಎರಡು ದಿನಗಳ ನಂತರ ಈ ಕುರಿತು ಸ್ಪಷ್ಟೀಕರಣ ನೀಡಿರುವ ಶರದ್ ಪವಾರ್, ನಾನೂ ಭಾಗಿಯಾಗಿದ್ದ 2019ರ ಮಾತುಕತೆಯನ್ನು ಹೊಸ ದಿಲ್ಲಿಯ ಗೌತಮ್ ಅದಾನಿ ನಿವಾಸದಲ್ಲಿ ಏರ್ಪಡಿಸಲಾಗಿತ್ತು ಎಂದು ಹೇಳಿದ್ದಾರೆ.

ಆದರೆ, ಈ ಭೋಜನಕೂಟದ ಆತಿಥ್ಯವನ್ನು ಗೌತಮ್ ಅದಾನಿ ವಹಿಸಿದ್ದರಾದರೂ, ಅವರು ರಾಜಕೀಯ ಚರ್ಚೆಗಳಲ್ಲಿ ಭಾಗಿಯಾಗಿರಲಿಲ್ಲ ಎಂದೂ ಅವರು ಹೇಳಿದ್ದಾರೆ.

The News Minute-Newslaundry ಸುದ್ದಿ ಸಂಸ್ಥೆಗಳಿಗೆ ಸಂದರ್ಶನ ನೀಡಿರುವ ಶರದ್ ಪವಾರ್, ಮೇಲಿನಂತೆ ಹೇಳಿಕೆ ನೀಡಿದ್ದಾರೆ. ಆ ಭೋಜನ ಕೂಟದಲ್ಲಿ ನನ್ನನ್ನು ಹೊರತುಪಡಿಸಿ, ಗೌತಮ್ ಅದಾನಿ, ಅಮಿತ್ ಶಾ ಹಾಗೂ ಅಜಿತ್ ಪವಾರ್ ಹಾಜರಿದ್ದರು ಎಂದು ಹೇಳಿದ್ದಾರೆ. ಬೆಳಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರೊಂದಿಗೆ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಹಿಂದಿನ ದಿನ ಈ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಆದರೆ, ಆ ಸರಕಾರವು ಕೇವಲ 80 ಗಂಟೆಗಳಲ್ಲಿ ಪತನಗೊಂಡಿತ್ತು.

ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಪ್ರಕರಣಗಳನ್ನು ಎದುರಿಸುತ್ತಿದ್ದ ಹಲವಾರು ಎನ್ಸಿಪಿ ಸಹೋದ್ಯೋಗಿಗಳು, ಒಂದು ವೇಳೆ ನಾವು ಬಿಜೆಪಿಯೊಂದಿಗೆ ಕೈಜೋಡಿಸಿದರೆ, ನಮ್ಮ ಮೇಲಿನ ಎಲ್ಲ ಪ್ರಕರಣಗಳನ್ನೂ ಹಿಂಪಡೆಯುವುದಾಗಿ ಭರವಸೆ ನೀಡಲಾಗಿದೆ ಎಂದು ನನಗೆ ತಿಳಿಸಿದರು. ಆದರೆ, ಬಿಜೆಪಿ ತನ್ನ ಭರವಸೆ ಉಳಿಸಿಕೊಳ್ಳುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿರಲಿಲ್ಲ. ಆದರೆ, ನನ್ನ ಸಹೋದ್ಯೋಗಿಗಳು ಒತ್ತಾಯಿಸಿದ್ದರಿಂದ ನಾನು ಅದಾನಿ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಭೋಜನಕೂಟದಲ್ಲಿ ಅಮಿತ್ ಶಾರೊಂದಿಗೆ ಭಾಗವಹಿಸಿದ್ದೆ ಎಂದು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News