ಕೆನಡಾ ಚುನಾವಣೆಯಲ್ಲಿ ಹಸ್ತಕ್ಷೇಪ ಆರೋಪ ನಿರಾಕರಿಸಿದ ಭಾರತ

Update: 2024-04-07 02:34 GMT

Photo : freepik

ಹೊಸದಿಲ್ಲಿ: ಕೆನಡಾದಲ್ಲಿ 2019 ಮತ್ತು 2021ರಲ್ಲಿ ನಡೆದ ಚುನಾವಣೆಯಲ್ಲಿ ಹಸ್ತಕ್ಷೇಪಕ್ಕೆ ಭಾರತ ಹಾಗೂ ಪಾಕಿಸ್ತಾನ ಪ್ರಯತ್ನಿಸಿದ್ದವು ಎಂದು ಗುಪ್ತಚರ ಏಜೆನ್ಸಿ ಆಪಾದಿಸಿವೆ. ಆದರೆ ಭಾರತ ಈ ಆರೋಪವನ್ನು ಬಲವಾಗಿ ಅಲ್ಲಗಳೆದಿದೆ.

ಕೆನಡಾದ ಭದ್ರತಾ ಗುಪ್ತಚರ ಸೇವೆಗಳ ವಿಭಾಗ (ಸಿಎಸ್ಐಎಸ್) ವರ್ಗೀಕೃತವಲ್ಲದ ಸಾರಾಂಶವನ್ನು ಬಿಡುಗಡೆ ಮಾಡಿದ್ದು, ಈ ಮಾಹಿತಿ ಫೆಡರಲ್ ವಿಚಾರಣಾ ಆಯೋಗವು 2019 ಮತ್ತು 2021ರ ಚುನಾವಣೆಯಲ್ಲಿ ಚೀನಾ, ಭಾರತ, ರಷ್ಯಾ ಮತ್ತು ಇತರ ದೇಶಗಳ ಸಂಭಾವ್ಯ ಹಸ್ತಕ್ಷೇಪದ ಬಗ್ಗೆ ನಡೆಸುತ್ತಿರುವ ತನಿಖೆಯ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದೆ.

ಆದರೆ ಈ ಆರೋಪಗಳು ನಿರಾಧಾರ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಲ್ಲಗಳೆದಿದೆ. ಭಾರತೀಯ ಹಸ್ತಕ್ಷೇಪದ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಕ್ತಾರ ರಣಧೀರ ಜೈಸ್ವಾಲ್, ಭಾರತದ ಆಂತರಿಕ ವಿಚಾರಗಳಲ್ಲಿ ಕೆನಡಾ ಹಸ್ತಕ್ಷೇಪ ಮಾಡುತ್ತಿದೆ ಎಂಬ ಪ್ರತ್ಯಾರೋಪ ಮಾಡಿದರು.

ಕೆನಡಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ವರದಿಯ ಪ್ರಕಾರ, ಬಿಡುಗಡೆಯಾಗಿರುವ ಮಾಹಿತಿಯಂತೆ ಕೆನಡಾ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಭಾರತ ಹಾಗೂ ಪಾಕಿಸ್ತಾನ ಪ್ರಯತ್ನಿಸಿದ್ದವು. ಕಳೆದ ಎರಡು ಸಾರ್ವತ್ರಿಕ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ ಬಗ್ಗೆ ಫೆಡರಲ್ ತನಿಖಾ ಆಯೋಗ ವಿಚಾರಣೆ ನಡೆಸುತ್ತಿದೆ.

ಭಾರತ ಸರ್ಕಾರ 2021ರಲ್ಲಿ ಹಸ್ತಕ್ಷೇಪದ ಉದ್ದೇಶದಿಂದ ಭಾರತ ಸರ್ಕಾರ ನಕಲಿ ಏಜೆಂಟರನ್ನು ಬಳಸುವುದು ಸೇರಿದಂತೆ ರಹಸ್ಯ ಚಟುವಟಿಕೆಗಳನ್ನು ನಡೆಸಿರುವ ಸಾಧ್ಯತೆ ಇದೆ ಎಂದು ಸಿಎಸ್ಐಎಸ್ ಆಪಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News