ಭಾರತದಲ್ಲಿ ಈ ವರ್ಷ ಹೆಚ್ಚು ಭೂಕಂಪನ ಸಂಭವಿಸಲು ಕಾರಣ ವಿವರಿಸಿದ ಕೇಂದ್ರ ಸಚಿವ

Update: 2023-12-07 09:35 GMT

ಕೇಂದ್ರ ಸಚಿವ ಕಿರಣ್ ರಿಜಿಜು (PTI)

ಹೊಸದಿಲ್ಲಿ: ಸಕ್ರಿಯ ಶಿಲಾಪದರ ಪ್ರದೇಶಗಳಲ್ಲಿರುವ ಪ್ರಾಂತ್ಯಗಳಲ್ಲಿನ ಭೂಕಂಪನ ಚಟುವಟಿಕೆಗಳು ಏರುಪೇರಾಗುವುದರಿಂದ ಉತ್ತರ ಭಾರತ ಹಾಗೂ ನೇಪಾಳಗಳಲ್ಲಿ ಕೆಲವೊಮ್ಮೆ ಸಾಧಾರಣ ಭೂಕಂಪನಗಳು ಸಂಭವಿಸುವುದು ಸಾಮಾನ್ಯವಾಗಿದೆ ಎಂದು ಬುಧವಾರ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಶ್ಚಿಮ ನೇಪಾಳದಲ್ಲಿನ ಅಲ್ಮೋರಾ ಶಿಲಾಪದರಗಳ ಕ್ರಿಯಾಶೀಲತೆ ಉತ್ತರ ಭಾರತ ಹಾಗೂ ನೇಪಾಳಗಳಲ್ಲಿ ಭೂಕಂಪ ಸಂಭವಿಸಲು ಕಾರಣ. ಇದರಿಂದಾಗಿ ಜನವರಿ 24ರಂದು 5.8 ತೀವ್ರತೆಯ ಭೂಕಂಪ, ಅಕ್ಟೋಬರ್ 3 ಹಾಗೂ ನವೆಂಬರ್ 3ರಂದು ಕ್ರಮವಾಗಿ 6.2 ಹಾಗೂ 6.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಈ ಕುರಿತ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರವನ್ನು ಲೋಕಸಭೆಗೆ ನೀಡಲಾಗಿದೆ.

2023ರ ಜನವರಿಯಿಂದ ನವೆಂಬರ್ ತಿಂಗಳ ಅವಧಿಯಲ್ಲಿ 3.0-3.9 ತೀವ್ರತೆಯ 97 ಭೂಕಂಪಗಳು ಉತ್ತರ ಭಾರತ ಹಾಗೂ ನೇಪಾಳದಲ್ಲಿ ಸಂಭವಿಸಿವೆ. ಆದರೆ, 2022 ಹಾಗೂ 2021ರಲ್ಲಿ ತಲಾ 41 ಭೂಕಂಪಗಳು ಸಂಭವಿಸಿದ್ದರೆ, 2020ರಲ್ಲಿ 42 ಭೂಕಂಪಗಳು ಸಂಭವಿಸಿದ್ದವು ಎಂದು ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News