ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ; ಕಾಡಿನಲ್ಲಿ ಪತ್ತೆಯಾದ ಮೃತದೇಹ

Update: 2024-03-17 06:05 GMT

ಸಾಂದರ್ಭಿಕ ಚಿತ್ರ 

ವಿಜಯವಾಡ: ಅಪರಿಚಿತ ಹಂತಕರು ಗುಂಟೂರು ಜಿಲ್ಲೆಯ 20 ವರ್ಷದ ವಿದ್ಯಾರ್ಥಿಯಾದ ಪರುಚೂರಿ ಅಭಿಜಿತ್ (20) ಎಂಬಾತನನ್ನು ಹತ್ಯೆಗೈದಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಹಂತಕರು ಮೃತದೇಹವಿದ್ದ ಕಾರನ್ನು ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಅಭಿಜಿತ್ ಪರುಚೂರಿ ಚಕ್ರಧರ್ ಮತ್ತು ಶ್ರೀಲಕ್ಷ್ಮಿ ಅವರ ಏಕಮಾತ್ರ ಪುತ್ರನಾಗಿದ್ದರು.

ಅಭಿಜಿತ್ ತನ್ನ ಬಾಲ್ಯದಿಂದಲೇ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಎಂದು ಹೇಳಲಾಗಿದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಬೇಕು ಎಂದು ಅಭಿಜಿತ್ ಬಯಕೆ ವ್ಯಕ್ತಪಡಿಸಿದಾಗ, ಮೊದಲಿಗೆ ಆತನ ತಾಯಿ ಶ್ರೀಲಕ್ಷ್ಮಿ ಆತನ ಪ್ರಸ್ತಾವನೆಯನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಆದರೆ, ಆತನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಆತ ವಿದೇಶಕ್ಕೆ ತೆರಳಲು ಅನುಮತಿ ನೀಡಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಸೀಟು ದೊರೆತ ನಂತರ ಅಭಿಜಿತ್ ಅಮೆರಿಕಾಗೆ ತೆರಳಿದ್ದ ಎಂದು ಹೇಳಲಾಗಿದೆ.

ಹಂತಕರು ಅಭಿಜಿತ್ ನ ದುಡ್ಡು ಹಾಗೂ ಲ್ಯಾಪ್ ಟಾಪ್ ಗಾಗಿ ಹತ್ಯೆಗೈದಿರಬಹುದು ಎಂದು ಶಂಕಿಸಲಾಗಿದೆ.

ಆದರೆ, ಈ ಹತ್ಯೆಯು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿರುವುದರಿಂದ, ಆತನು ಇತರೆ ವಿದ್ಯಾರ್ಥಿಗಳೊಂದಿಗೆ ಜಗಳ ಮಾಡಿಕೊಂಡಿರಬಹುದು ಎಂದೂ ಶಂಕಿಸಲಾಗಿದೆ. ಅಮೆರಿಕಾದಲ್ಲಿ ಎಲ್ಲ ಔಪಚಾರಿಕ ಕ್ರಮಗಳನ್ನು ಪೂರೈಸಿದ ನಂತರ, ಮೃತದೇಹವನ್ನು ಗುಂಟೂರು ಜಿಲ್ಲೆಯ ಬುರ್ರಿಪಲೆಮ್ ಗೆ ರವಾನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News