ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾರ್ಥಿ ಸಾವು: ವರದಿ ನಿರಾಕರಿಸಿದ ಬ್ರಿಟನ್ ಪೊಲೀಸರು

Update: 2023-12-21 03:26 GMT

ಲಂಡನ್: ಹಲವು ದಿನಗಳಿಂದ ನಾಪತ್ತೆಯಾಗಿರುವ ಭಾರತೀಯ ಸಿಖ್ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂಬ ಮಾಧ್ಯಮ ವರದಿಗಳನ್ನು ಬ್ರಿಟನ್ ಪೊಲೀಸರು ಮತ್ತು ವಿದ್ಯಾರ್ಥಿಯ ಕುಟುಂಬದವರು ಅಲ್ಲಗಳೆದಿದ್ದಾರೆ. ಆತನಿಗಾಗಿ ಕಾತರಿದಿಂದ ಕಾಯುತ್ತಿದ್ದೇವೆ ಎಂದು ಕುಟುಂಬದವರು ಹೇಳಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ಹುಟ್ಟುಹಬ್ಬದ ಪಾರ್ಟಿಗೆ ತೆರಳಿದ ಗುರುಶಮನ್ ಸಿಂಗ್ ಭಾಟಿಯಾ (23) ಅಲಿಯಾಸ್ ಅಶ್ಮನ್ ಸಿಂಗ್ ನಾಪತ್ತೆಯಾಗಿದ್ದು, ಆತನ ಸಹೋದರನ ಜತೆ ಮಾತನಾಡಿದಾಗ, ಜಾಲಂಧರ್ ನ ಮಾಡೆಲ್ ಟೌನ್ ನಲ್ಲಿ ತಾನು ಹಾಗೂ ತಾಯಿ ಆತನಿಗೆ ಕಾತರದಿಂದ ಕಾಯುತ್ತಿರುವುದಾಗಿ ಸ್ಪಷ್ಟಪಡಿಸಿದರು. ಭಾಟಿಯಾ ತಂದೆ ಲಂಡನ್ ಗೆ ಆಗಮಿಸಿ, ಬ್ರಿಟನ್ ನಲ್ಲಿರುವ ಇತರ ಸಂಬಂಧಿಕರ ನೆರವಿನೊಂದಿಗೆ ಮಗನ ಹುಡುಕಾಟದಲ್ಲಿದ್ದಾರೆ.

ಲೋಬರ್ಗ್ ವಿಶ್ವವಿದ್ಯಾನಿಯದಲ್ಲಿ ಒಂದು ವರ್ಷದ ಮಾಸ್ಟರ್ಸ್ ಪದವಿಗಾಗಿ ಭಾಟಿಯಾ ಕಳೆದ ಜನವರಿಯಲ್ಲಿ ಲಂಡನ್ ಗೆ ಆಗಮಿಸಿದ್ದರು.

"ಆತನ ಸುಳಿವು ಇದುವರೆಗೆ ಪತ್ತೆಯಾಗಿಲ್ಲ. ಆತನ ಮೃತದೇಹ ಸಿಕ್ಕಿದೆ ಎಂಬ ವರದಿ ನಿಜವಲ್ಲ. ಆತನಿಗಾಗಿ ಇನ್ನೂ ಹುಡುಕಾಟ ಮುಂದುರಿಸಿದ್ದೇವೆ. ಶುಕ್ರವಾರ ರಾತ್ರಿ ಆತ ತನ್ನ ಇತರ ಮೂವರು ಸ್ನೇಹಿತರ ಜತೆಗೆ ಕೆನರಿ ವಾರ್ಫ್ ನಲ್ಲಿರುವ ತನ್ನ ಕೊಠಡಿಯಲ್ಲಿ ಹುಟ್ಟುಹಬ್ಬ ಆಚರಿಸಿದ್ದ. ಆತ ಬಾಡಿಗೆ ಫ್ಲಾಟ್ ನಲ್ಲಿ ವಾಸವಿದ್ದಾನೆ. ತಡರಾತ್ರಿ ಸ್ನೇಹಿತರ ಜತೆ ವಾಯುವಿಹಾರಕ್ಕೆ ತೆರಳಿದ್ದು, ಸ್ನೇಹಿತರು ಮರಳಿದರೂ ಆತ ವಾಪಸ್ಸಾಗಿಲ್ಲ. ಆತ ಫೋನ್ ಗೆ ಕೂಡಾ ಸಿಗುತ್ತಿಲ್ಲ. ಲಂಡನ್ ನಲ್ಲಿ ಆತ ಖುಷಿಯಾಗಿದ್ದ. ಎಲ್ಲ ವಿವರಗಳನ್ನು ಆತನ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ" ಎಂದು ಸಹೋದರ ದೂರವಾಣಿ ಮೂಲಕ ತಿಳಿಸಿದರು.

"ತನಿಖೆ ಬಗ್ಗೆ ನಮಗೆ ಮಾಹಿತಿ ಇದೆ. ಈ ಬಗ್ಗೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಯಾರ ದೇಹವೂ ಪತ್ತೆಯಾಗಿಲ್ಲ. ಆತನ ದೇಹವನ್ನು ಕೆನರಿ ವಾರ್ಫ್ ನಲ್ಲಿ ನೀರಿನಿಂದ ಹೊರಗೆತೆಯಲಾಗಿದೆ ಎಂಬ ಮಾಧ್ಯಮ ವರದಿಗಳು ಸುಳ್ಳು. ಶೋಧ ಕಾರ್ಯಾಚರಣೆ ಮುಂದುವರಿಯಲಿದೆ" ಎಂದು ಮೆಟ್ರೋಪಾಲಿಟನ್ ಪೊಲೀಸ್ ವಕ್ತಾರರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News