ತಮಿಳುನಾಡು ಸಚಿವ, ಪುತ್ರನ ಮೇಲೆ ತನಿಖಾ ಸಂಸ್ಥೆ ದಾಳಿ; ರಾಜಕೀಯ ಸೇಡು ಎಂದ ಡಿಎಂಕೆ

Update: 2023-07-17 06:49 GMT

ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಎಂಕೆ ನಾಯಕ ಹಾಗೂ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ . ಪೊನ್ಮುಡಿ ಹಾಗೂ ಅವರ ಪುತ್ರ, ಸಂಸದ ಗೌತಮ್ ಸಿಗಮಣಿ ಅವರ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ(ಈಡಿ)ಸೋಮವಾರ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜ್ಯ ರಾಜಧಾನಿ ಚೆನ್ನೈ ಮತ್ತು ವಿಲ್ಲುಪುರಂನಲ್ಲಿ ತಂದೆ-ಮಗನಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗುತ್ತಿದೆ . ಆಡಳಿತಾರೂಢ ಡಿಎಂಕೆ ಈ ಕ್ರಮವನ್ನು 'ರಾಜಕೀಯ ಸೇಡಿನ' ಕ್ರಮ ಎಂದು ಕರೆದಿದೆ

72 ವರ್ಷದ ಸಚಿವರು ವಿಲ್ಲುಪುರಂ ಜಿಲ್ಲೆಯ ತಿರುಕ್ಕೊಯಿಲೂರ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರೆ, ಅವರ 49 ವರ್ಷದ ಮಗ ಸಿಗಮಣಿ ಕಲ್ಲಕುರಿಚಿ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರಾಗಿದ್ದಾರೆ.

ಪೊನ್ಮುಡಿ ಅವರು ರಾಜ್ಯ ಗಣಿ ಸಚಿವರಾಗಿದ್ದಾಗ (2007 ಮತ್ತು 2011 ರ ನಡುವೆ) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕ್ವಾರಿ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ ಆರೋಪಗಳಿದ್ದು, ಬೊಕ್ಕಸಕ್ಕೆ ಸುಮಾರು ₹ 28 ಕೋಟಿ ನಷ್ಟವಾಗಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News