ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಅವ್ಯವಹಾರ: ಪಕ್ಷದ ಶಾಸಕನಿಂದಲೇ ಆರೋಪ

Update: 2024-10-16 04:00 GMT

ಅಜಯ್ ಬಿಷ್ಣೋಯಿ PC: Screengrab/X.com

ಭೋಪಾಲ್: ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿದೆ ಎಂದು ಅದೇ ಪಕ್ಷದ ಶಾಸಕ ಮತ್ತು ಮಾಜಿ ಸಚಿವ ಅಜಯ್ ಬಿಷ್ಣೋಯಿ ಗಂಭೀರ ಆರೋಪ ಮಾಡುವ ಮೂಲಕ ಆಡಳಿತ ಪಕ್ಷದಲ್ಲಿ ವಿವಾದದ ಕಿಡಿ ಹಚ್ಚಿದ್ದಾರೆ.

ಸದಸ್ಯತ್ವ ಪ್ರಕ್ರಿಯೆಯನ್ನೇ ಎಕ್ಸ್ ಪೋಸ್ಟ್ ನಲ್ಲಿ ಪ್ರಶ್ನಿಸಿರುವ ಅವರು, ಬಾಹ್ಯ ಏಜೆನ್ಸಿಗಳಿಗೆ ಈ ಅಭಿಯಾನದ ಹೊರಗುತ್ತಿಗೆ ನೀಡಲಾಗಿದೆ ಮತ್ತು ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸಲು ಹಣವನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಅಪಾದಿಸಿದ್ದಾರೆ.

ಎಕ್ಸ್ ಪೋಸ್ಟ್ ನಲ್ಲಿ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿರುವ ಅವರು, "ನನ್ನ ಪರವಾಗಿ ಗುತ್ತಿಗೆ ಆಧಾರದಲ್ಲಿ ಬಿಜೆಪಿ ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಭರವಸೆ ನೀಡುವ ಒಂದು ಏಜೆನ್ಸಿಯಿಂದ ನನಗೆ ದೂರವಾಣಿ ಕರೆ ಬಂದಿದೆ" ಎಂದು ಹೇಳಿದ್ದಾರೆ. ಪಕ್ಷದ ಸದಸ್ಯತ್ವ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಲುವಾಗಿ ಇಂಥ ಸೇವೆಗಳನ್ನು ಬಳಸಿಕೊಳ್ಳುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವುದು ಸರಿಯಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.

ಇಂಥದ್ದೇ ಹಲವು ಏಜೆನ್ಸಿಗಳು ಇರಬಹುದು. ಸಂಘಟನೆಯನ್ನು ನಾಶಪಡಿಸುವ ಮೂಲಕ ಹೆಚ್ಚಿನ ಸಂಖ್ಕೆ ತೋರಿಸಿ ಸ್ವಯಂಘೋಷಿತ ನಾಯಕರು ತಮ್ಮ ಶ್ರೇಣಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಲು ಇದು ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News