ಹಾರಲು ತುಂಬಾ ತಡವೇನೂ ಆಗಿಲ್ಲ: ಪ್ಯಾರಾಮೋಟರಿಂಗ್ ಕಲಿಯುತ್ತಿರುವ 97 ವರ್ಷದ ಮಹಿಳೆಗೆ ಆನಂದ್ ಮಹೀಂದ್ರ ಮೆಚ್ಚುಗೆ
ಹೊಸ ದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಉದ್ಯಮಿ ಆನಂದ್ ಮಹೀಂದ್ರ, ನಿಯಮಿತವಾಗಿ ಟ್ರೆಂಡಿಂಗ್ ವಿಷಯಗಳು ಹಾಗೂ ತಾವು ಭಾಗಿಯಾಗಿರುವ ಕತೆಗಳ ಕುರಿತು ತಮ್ಮ 10.8 ದಶಲಕ್ಷ ಹಿಂಬಾಲಕರಿಗಾಗಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ಯಾರಾಮೋಟರಿಂಗ್ ಕಲಿಯುತ್ತಿರುವ 97 ವರ್ಷದ ವೃದ್ಧ ಮಹಿಳೆಯ ಕುರಿತು ಅವರು ವೀಡಿಯೊ ಪೋಸ್ಟ್ ಮಾಡಿದ್ದು, “ಆಕೆ ಈ ದಿನದ ಹೀರೊ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಆ ವೀಡಿಯೊದಲ್ಲಿ ಶಿಕ್ಷಕರ ನೆರವಿನೊಂದಿಗೆ ಆ ವೃದ್ಧ ಮಹಿಳೆಯು ಪ್ಯಾರಾಮೋಟರಿಂಗ್ ಕಲಿಯುತ್ತಿರುವುದನ್ನು ನೋಡಬಹುದಾಗಿದೆ. ಆ ವೀಡಿಯೊ ನೋಡಿದ ಹಲವಾರು ಬಳಕೆದಾರರು, ಸಾಹಸಮಯ ಕ್ರೀಡೆಯೆಡೆಗಿನ ಆಕೆಯ ಧೈರ್ಯ ಹಾಗೂ ದೃಢ ನಿರ್ಣಯವನ್ನು ಪ್ರಶಂಸಿಸಿದ್ದಾರೆ. ಆ ವೀಡಿಯೊವನ್ನು ಪೋಸ್ಟ್ ಮಾಡಿರುವ ಉದ್ಯಮಿ ಆನಂದ್ ಮಹೀಂದ್ರ, “ಹಾರಲು ಇದು ತೀರಾ ತಡವಲ್ಲ. ಆಕೆ ನನ್ನ ಈ ದಿನದ ಹೀರೊ” ಎಂದು ಆ ವೀಡಿಯೊಗೆ ಶೀರ್ಷಿಕೆ ನೀಡಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಆ ವೀಡಿಯೊ ಹಂಚಿಕೆಯಾದಾಗಿನಿಂದ 6.4 ಲಕ್ಷ ಮಂದಿ ವೀಕ್ಷಿಸಿದ್ದು, 17,000 ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ̤
It’s NEVER too late to fly.
— anand mahindra (@anandmahindra) November 23, 2023
She’s my hero of the day… pic.twitter.com/qjskoIaUt3