ಜಮ್ಮುಕಾಶ್ಮೀರ: ಸೇನಾ ಶಿಬಿರದ ಮೇಲೆ ಶಂಕಿತ ಭಯೋತ್ಪಾದಕರ ದಾಳಿ ; ಯೋಧನಿಗೆ ಗಾಯ
Update: 2024-09-02 16:01 GMT
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಜಮ್ಮು ದರ್ಬಾರ್ ಸಮೀಪವಿರುವ ಸುಂಜ್ವಾನ್ ಸೇನಾ ಶಿಬಿರದ ಮೇಲೆ ಶಂಕಿತ ಭಯೋತ್ಪಾದಕರು ಸೋಮವಾರ ನಡೆಸಿದ ದಾಳಿಯ ಪರಿಣಾಮ ಓರ್ವ ಯೋಧ ಗಾಯಗೊಂಡಿದ್ದಾನೆ.
36 ಇನ್‌ಫೆಂಟ್ರಿ ಬ್ರಿಗೇಡ್ ಪಹರೆ ನಡೆಸುತ್ತಿದ್ದ ಶಿಬಿರದ ಕಾವಲು ಠಾಣೆಯ ಸಮೀಪ ಸೋಮವಾರ ಬೆಳಗ್ಗೆ ಸುಮಾರು 10.50ಕ್ಕೆ ಈ ದಾಳಿ ನಡೆಯಿತು.
ಈ ಪ್ರದೇಶದಲ್ಲಿ ಶಂಕಿತ ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 31ರಂದು ಜಮ್ಮು ಹಾಗೂ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಝ್ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಶಂಕಿತ ಭಯೋತ್ಪಾದಕರ ಒಳನುಸುಳುವ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದವು. ಗಡಿ ನಿಯಂತ್ರಣ ರೇಖೆಯ ಬೇಲಿ ಸಮೀಪ ಶಂಕಿತ ಭಯೋತ್ಪಾದಕರ ಚಲನವಲನವನ್ನು ಗಮನಿಸಿದ ಬಳಿಕ ಒಳನುಸುಳುಕೋರರು ಹಾಗೂ ಯೋಧರ ನಡುವೆ ಗುಂಡಿನ ಕಾಳಗ ನಡೆದಿತ್ತು.