ಜಮ್ಮುಕಾಶ್ಮೀರ | ಮೊದಲ ಹಂತದ ಚುನಾವಣೆಗೆ ಅಧಿಸೂಚನೆ ಪ್ರಕಟ

Update: 2024-08-20 15:26 GMT

ಸಾಂದರ್ಭಿಕ ಚಿತ್ರ

ಶ್ರೀನಗರ : ಜಮ್ಮುಕಾಶ್ಮೀರ ವಿಧಾನಸಭೆಯ ಮೊದಲನೆ ಹಂತದ ಚುನಾವಣೆಗೆ ಸಂಬಂಧಿಸಿ ಚುನಾವಣಾ ಆಯೋಗವು ಮಂಗಳವಾರ ಅಧಿಸೂಚನೆಯನ್ನು ಹೊರಡಿಸಿದೆ. ಸೆಪ್ಟೆಂಬರ್ 18ರಂದು ಮೊದಲ ಹಂತದ ಮತದಾನ ನಡೆಯಲಿದ್ದು, 24 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಅಧಿಸೂಚನೆಯ ಪ್ರಕಟಣೆಯೊಂದಿಗೆ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಡಿದೆ. ಮೊದಲ ಹಂತದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಆಗಸ್ಟ್ 27 ಕೊನೆಯ ದಿನಾಂಕವಾಗಿದೆ. ಆಗಸ್ಟ್ 28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ನಾಮಪತ್ರ ಹಿಂತೆಗೆತಕ್ಕೆ ಆಗಸ್ಟ್ 30 ಕೊನೆಯ ದಿನಾಂಕವಾಗಿದ್ದು, ಸೆಪ್ಟೆಂಬರ್ 18ರಂದು ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ ದಕ್ಷಿಣ ಕಾಶ್ಮೀರದ 16 ವಿಧಾನಸಭಾ ಕ್ಷೇತ್ರಗಳು ಹಾಗೂ ಜಮ್ಮು ಪ್ರಾಂತದ ಎಂಟು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ ಕಾಶ್ಮೀರ ಕಣಿವೆಯ ಪಾಂಪೊರ್, ತ್ರಾಲ್, ಪುಲ್ವಾಮಾ, ರಾಜ್‌ಪೊರಾ, ಝೈನಾಪೊರಾ, ಶೋಪಿಯಾನಂ,ಡಿ.ಎಚ್.ಪೊರಾ, ಕುಲ್‌ಗಾಂವ್, ದೇವ್ಸಾರ್,ಡೂರು, ಕೊಕೆರ್‌ನಾಗ್ (ಎಸ್‌ಟಿ), ಆನಂತನಾಗ್ ಪಶ್ಚಿಮ, ಆನಂತನಾಗ್, ಶ್ರೀಗುಫ್ವಾರ-ಬಿಜುಬೆಹಾರ, ಶಾಂಗುಸ್-ಆನಂತನಾಗ್ ಪೂರ್ವ ಹಾಗೂ ಪಹಲ್‌ಗಾಂವ್ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News