ಮಹಾರಾಷ್ಟ್ರ: ನೂತನ ವಿಪಕ್ಷ ನಾಯಕನಾಗಿ ಜಿತೇಂದ್ರ ಅವ್ಹಾದ್ ಆಯ್ಕೆ
ಮುಂಬೈ: ಮಹಾರಾಷ್ಟ್ರ ಪ್ರತಿಪಕ್ಷಗಳ ನಾಯಕನಾಗಿ ಎನ್‌ಸಿಪಿ ಪಕ್ಷವು ಜಿತೇಂದ್ರ ಅವ್ಹಾದ್ ಅವರನ್ನು ನೇಮಿಸಿದೆ.
ಏಕನಾಥ್ ಶಿಂಧೆ ಸರ್ಕಾರದ ನೂತನ ಉಪಮುಖ್ಯಮಂತ್ರಿಯಾಗಿ ಸೇರ್ಪಡೆಗೊಳ್ಳಲು ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಜಿತ್ ಪವಾರ್ ಅವರ ನಡೆಯಿಂದಾಗಿ ಹೊಸ ವಿಪಕ್ಷ ನಾಯಕನನ್ನು ಪಕ್ಷವು ಆಯ್ಕೆ ಮಾಡಿದೆ.
ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಅವರು ಮುಂಬ್ರಾ-ಕಲ್ವಾ ಕ್ಷೇತ್ರದ ಶಾಸಕರನ್ನು ಪಕ್ಷದ ಮುಖ್ಯ ಸಚೇತಕರಾಗಿ ನೇಮಿಸಿದ್ದಾರೆ .
ತಮ್ಮ ವಿರುದ್ಧ ನಡೆಯುತ್ತಿರುವ ಇಡಿ ಮತ್ತು ಸಿಬಿಐ ತನಿಖೆಯಿಂದಾಗಿ ಎನ್‌ಸಿಪಿ ನಾಯಕರು ಪಕ್ಷ ಬದಲಾಯಿಸಿದ್ದಾರೆ ಎಂಬ ಊಹಾಪೋಹಗಳಿಗೆ ನೂತನ ವಿಪಕ್ಷ ನಾಯಕರೂ ದನಿಗೂಡಿಸಿದ್ದಾರೆ. ಪಕ್ಷ ಬದಲಾಯಿಸಲು ಕೇಂದ್ರ ಏಜೆನ್ಸಿಗಳ ತನಿಖೆಗಳು ಕಾರಣವಾಗಿರಬಹುದು ಎಂದು ಜಿತೇಂದ್ರ ಅವ್ಹಾದ್ ಹೇಳಿದ್ದಾರೆ.
ಈ ನಾಯಕರು ರಾಜ್ಯ ಸರ್ಕಾರಕ್ಕೆ ಸೇರಲು ನಿರ್ಧರಿಸಿರುವುದರ ಹಿಂದೆ ನನಗೆ ಬೇರೆ ಯಾವುದೇ ಕಾರಣ ಕಾಣಿಸುತ್ತಿಲ್ಲ, ಅಂತಹ ಕೆಲಸ ಮಾಡುವ ಅಗತ್ಯವಿರಲಿಲ್ಲ ಎಂದು ಅವರು ತಿಳಿಸಿದರು.