ಉತ್ತರ ಪ್ರದೇಶ | ಅಪ್ರಾಪ್ತ NEET ವಿದ್ಯಾರ್ಥಿನಿಯನ್ನು ಒತ್ತೆಯಾಳಾಗಿಟ್ಟು ಅತ್ಯಾಚಾರ: ಇಬ್ಬರು ಶಿಕ್ಷಕರ ಬಂಧನ

Update: 2024-11-09 18:06 GMT

ಸಾಂದರ್ಭಿಕ ಚಿತ್ರ

ಕಾನ್ಪುರ: ನೀಟ್ ಆಕಾಂಕ್ಷಿ ಬಾಲಕಿಯನ್ನು ಆರು ತಿಂಗಳ ಕಾಲ ಒತ್ತೆಯಿಟ್ಟು, ನಿರಂತರ ಅತ್ಯಾಚಾರ, ಬ್ಲಾಕ್‌ ಮೇಲ್ ಎಸಗಿರುವ ಆರೋಪದಲ್ಲಿ ಪ್ರತಿಷ್ಠಿತ ಕೋಚಿಂಗ್‌ ಸೆಂಟರ್‌ ನ ಇಬ್ಬರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.

2022ರಲ್ಲಿ ನೀಟ್ ಪರೀಕ್ಷೆಗೆ ಕೋಚಿಂಗ್‌ ಪಡೆಯಲು ವಿದ್ಯಾರ್ಥಿನಿ ಕಾನ್ಪುರದ ಕೋಚಿಂಗ್ ಸೆಂಟರ್‌ಗೆ ದಾಖಲಾಗಿದ್ದರು. ಹೊಸ ವರ್ಷಾಚರಣೆಗಾಗಿ ಕಲ್ಯಾಣಪುರದಲ್ಲಿರುವ ತನ್ನ ಸ್ನೇಹಿತನ ಫ್ಲ್ಯಾಟ್ಗೆ ಕರೆದು ಕೋಚಿಂಗ್‌ ಶಿಕ್ಷಕ ಅಮಲು ಪದಾರ್ಥಗಳನ್ನು ನೀಡಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಇದಾದ ನಂತರ ಇನ್ನೋರ್ವ ಆರೋಪಿ ಕೂಡ ಹಲವು ತಿಂಗಳ ಕಾಲ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಸಂತ್ರಸ್ತ ವಿದ್ಯಾರ್ಥಿನಿ ಕಲ್ಯಾಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಎಸಿಪಿ ಅಭಿಷೇಕ್ ಪಾಂಡೆ, ಫತೇಹ್ಪುರ ಮೂಲದ ಬಾಲಕಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಈ ಕುರಿತು ಬಾಲಕಿ ಠಾಣೆಗೆ ದೂರು ನೀಡಿದ ನಂತರ, ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 328, 376(2), 344, 506 ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News