ಮಣಿಪುರ ಜನಾಂಗೀಯ ಸಂಘರ್ಷವನ್ನು ಪರಿಹರಿಸುವಲ್ಲಿ ದೊಡ್ಡ ಪಾತ್ರ ವಹಿಸಿ: ನಾಗಾ ನಾಯಕರಿಗೆ ಸಿಎಂ ಬಿರೇನ್ ಸಿಂಗ್ ಮನವಿ

Update: 2025-01-11 14:44 GMT

ಎನ್.ಬಿರೇನ್ ಸಿಂಗ್ | PC : PTI 

ಇಂಫಾಲ: ಮಣಿಪುರದಲ್ಲಿ ಮುಂದುವರಿದಿರುವ ಜನಾಂಗೀಯ ಸಂಘರ್ಷವನ್ನು ಪರಿಹರಿಸುವಲ್ಲಿ ಚರ್ಚ್ ಗಳು, ಸಮುದಾಯಗಳು ಹಾಗೂ ನಾಗಾ ಸಮುದಾಯದ ಇನ್ನಿತರ ನಾಯಕರು ದೊಡ್ಡ ಪಾತ್ರ ವಹಿಸಬೇಕು ಎಂದು ಶನಿವಾರ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮನವಿ ಮಾಡಿದ್ದಾರೆ.

ಮೇ 2023ರಿಂದ ಕುಕಿ ಮತ್ತು ಮೈತೈ ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಇಲ್ಲಿಯವರೆಗೆ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ನಿರ್ವಸತಿಗರಾಗಿದ್ದಾರೆ. ಈ ಸಂಘರ್ಷದಲ್ಲಿ ನಾಗಾ ಸಮುದಾಯ ಭಾಗಿಯಾಗಿಲ್ಲ.

ನಾಗಾ ಸಮುದಾಯದ ಬಾಹುಳ್ಯ ಹೊಂದಿರುವ ಸೇನಾಪತಿ ಜಿಲ್ಲೆಯ ಮರಂನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದನ್ನುದ್ದೇಶಿಸಿ ಮಾತನಾಡಿದ ಬಿರೇನ್ ಸಿಂಗ್, “ಸದ್ಯದ ಪರಿಸ್ಥಿತಿಯನ್ನು ಪರಿಹರಿಸಿ, ಶಾಂತಿಯನ್ನು ಮರು ಸ್ಥಾಪಿಸಲು ಮೂರನೆ ಸಮುದಾಯವಾದ ನಾಗಾಗಳಿಗೆ ಮನವಿ ಮಾಡಲು ಬಯಸುತ್ತೇನೆ. ಇದಕ್ಕಾಗಿ ಚರ್ಚ್ ಗಳು ಹಾಗೂ ಸಮುದಾಯಗಳ ನಾಯಕರು ಜವಾಬ್ದಾರಿ ಮತ್ತು ಉಪಕ್ರಮವನ್ನು ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.

ಎಲ್ಲ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಸಂವಿಧಾನ ಹಾಗೂ ಮಣಿಪುರ ಸರಕಾರದ ಕಾನೂನುಗಳಡಿ ಪರಿಹಾರ ಮಾಡಬಹುದಾಗಿದೆ ಎಂದೂ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News