ಪಂಜಾಬ್, ಹರ್ಯಾಣದ ಹೆಚ್ಚಿನ ಭಾಗಗಳಲ್ಲಿ ವಾಯು ಗುಣಮಟ್ಟ ‘ಕಳಪೆ’

Update: 2024-11-09 17:49 GMT

Photo Credit: PTI

ಚಂಡೀಗಢ: ಪಂಜಾಬ್ ಮತ್ತು ಹರ್ಯಾಣದ ವಿವಿಧ ಭಾಗಗಳಲ್ಲಿ ಶನಿವಾರ ‘ಕಳಪೆ’ ವಾಯು ಗುಣಮಟ್ಟ ದಾಖಲಾಗಿದೆ. ಆದರೆ, ಈ ರಾಜ್ಯಗಳ ಸಾಮಾನ್ಯ ರಾಜಧಾನಿ ಚಂಡೀಗಢದಲ್ಲಿ ವಾಯು ಗುಣಮಟ್ಟ ‘ಅತಿ ಕಳಪೆ’ಯಾಗಿದೆ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಸಮೀರ್ ಆ್ಯಪ್ ಪ್ರಕಾರ, ಹರ್ಯಾಣದ ಬಹಾದುರ್‌ಗಢದಲ್ಲಿ ಶನಿವಾರ ಬೆಳಗ್ಗೆ 9 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು 314 ಆಗಿತ್ತು. ಇದು ಕೂಡ ‘ಅತಿ ಕಳಪೆ’ ವಿಭಾಗದಲ್ಲಿ ಬರುತ್ತದೆ.

ಚಂಡೀಗಢದಲ್ಲಿ ಈ ಸೂಚ್ಯಂಕವು 322 ಆಗಿತ್ತು.

ಶನಿವಾರ ಬೆಳಗ್ಗೆ 9 ಗಂಟೆ ವೇಳೆಗೆ ಹರ್ಯಾಣದ ವಿವಿಧ ನಗರಗಳ ವಾಯು ಗುಣಮಟ್ಟ ಸೂಚ್ಯಂಕ ಹೀಗಿದೆ: ಸೋನಿಪತ್- 290, ಹಿಸಾರ್- 285, ಭಿವಾನಿ- 277, ಜಿಂದ್- 275, ಚರ್ಖಿ ದಾದ್ರಿ- 258, ಗುರುಗ್ರಾಮ- 259, ಫರೀದಾಬಾದ್- 220, ಯಮುನಾನಗರ- 213, ರೋಹ್ತಕ್- 238, ಕುರುಕ್ಷೇತ್ರ- 202, ಕೈತಾಲ್- 205, ಫತೇಹಾಬಾದ್- 198, ಅಂಬಾಲ- 160, ಸೀರ್ಸ- 181 ಮತ್ತು ಕರ್ನಲ್- 144.

ಪಂಜಾಬ್‌ನಲ್ಲಿ, ಮಂಡಿ ಗೋಬಿಂದಗಢದಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 264ಕ್ಕೆ ಕುಸಿದಿದೆ. ಅದು ಅಮೃತಸರದಲ್ಲಿ 258, ರೂಪನಗರದಲ್ಲಿ 257, ಜಲಂಧರ್‌ನಲ್ಲಿ 248, ಲುಧಿಯಾನದಲ್ಲಿ 197, ಬತಿಂಡದಲ್ಲಿ 183, ಖನ್ನದಲ್ಲಿ 176 ಮತ್ತು ಪಟಿಯಾಲದಲ್ಲಿ 133 ಆಗಿತ್ತು.

ವಾಯು ಗುಣಮಟ್ಟ ಸೂಚ್ಯಂಕವು ಸೊನ್ನೆ ಮತ್ತು 50ರ ನಡುವೆ ಇದ್ದರೆ ಅದು ‘ಉತ್ತಮ’ (ಗುಡ್) ವಿಭಾಗದಲ್ಲಿ ಬರುತ್ತದೆ. 51 ಮತ್ತು 100ರ ನಡುವಿನ ಸೂಚ್ಯಂಕವನ್ನು ‘ತೃಪ್ತಿಕರ’ (ಸ್ಯಾಟಿಸ್‌ಫ್ಯಾಕ್ಟರಿ), 101 ಮತ್ತು 200ರ ನಡುವಿನ ಸೂಚ್ಯಂಕವನ್ನು ‘ಸಾಧಾರಣ’ (ಮೋಡರೇಟ್), 201 ಮತ್ತು 300ರ ನಡುವಿನ ಸೂಚ್ಯಂಕವನ್ನು ‘ಕಳಪೆ’ (ಪೂವರ್), 301 ಮತ್ತು 400ರ ನಡುವಿನ ಸೂಚ್ಯಂಕವನ್ನು ‘ಅತ್ಯಂತ ಕಳಪೆ’ (ವೆರಿ ಪೂವರ್), 401 ಮತ್ತು 450ರ ನಡುವಿನ ಸೂಚ್ಯಂಕವನ್ನು ‘ತೀವ್ರ’ (ಸೀವಿಯರ್) ಮತ್ತು 450ಕ್ಕಿಂತ ಹೆಚ್ಚಿನ ಸೂಚ್ಯಂಕವನ್ನು ‘ಅತಿ ತೀವ್ರ’ (ಸೀವಿಯರ್ ಪ್ಲಸ್)ಎಂಬುದಾಗಿ ವರ್ಗೀಕರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News