ಕೊಲ್ಕತ್ತಾ | ಪಕ್ಷದ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಸೌತ್ 24 ಪರಗಣಾ ಜಿಲ್ಲೆಯ ಉಸ್ತಿ ಎಂಬಲ್ಲಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತನ ಶವ ಶನಿವಾರ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಪಕ್ಷದ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ಪೃಥ್ವೀರಾಜ್ ನಸ್ಕರ್ ಎಂಬ ಕಾರ್ಯಕರ್ತನ ಶವ ಪತ್ತೆಯಾಗಿದೆ.ಬಿಜೆಪಿ ಈ ಘಟನೆಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ದೂಷಿಸಿದೆ. ಅದರೆ ಈ ಘಟನೆ ಸಂಬಂಧ ಮಹಿಳೆಯೊಬ್ಬರನ್ನು ಬಂಧಿಸಿರು ಪೊಲೀಸರು, ವೈಯಕ್ತಿಕ ಕಾರಣಗಳಿಂದ ಈ ಹತ್ಯೆ ನಡೆದಿದೆ ಎಂದು ಪ್ರತಿಪಾದಿಸಿದ್ದಾರೆ.
ನಸ್ಕರ್ ಅವರ ರಕ್ತಸಿಕ್ತ ದೇಹವನ್ನು ಪಕ್ಷದ ಕಚೇರಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಈತ ನವೆಂಬರ್ 5ರಿಂದ ನಾಪತ್ತೆಯಾಗಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ನಾಸ್ಕರ್ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ ಪರಿಣಾಮ ಆತ ಸಾವಿಗೀಡಾಗಿದ್ದನ್ನು ಬಂಧಿತ ಮಹಿಳೆ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾಗಿ ಪೊಲೀಸರು ವಿವರಿಸಿದ್ದಾರೆ.
"ಮೃತ ವ್ಯಕ್ತಿಯು ಬಂಧಿತ ಮಹಿಳೆಯ ಜತೆಗೆ ಯಾವುದೇ ಸಂಬಂಧ ಹೊಂದಿದ್ದನೇ ಅಥವಾ ಜಗಳವಾಡಿದ್ದನೇ ಎಂಬ ಆಯಾಮದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಶವಪತ್ತೆಯಾದ ಕಚೇರಿಯ ಎದುರಿನ ಬಾಗಿಲಿಗೆ ಬೀಗಹಾಕಲಾಗಿತ್ತು. ದುಷ್ಕರ್ಮಿ ಕೃತ್ಯ ಎಸಗಿ ಹಿಂದಿನ ಬಾಗಿಲಿನಿಮದ ತಪ್ಪಿಸಿಕೊಂಡಿರಬೇಕು ಎಂದು ಶಂಕಿಸಲಾಗಿದೆ.