ಬಿಜೆಪಿ ಸೇರಿ ಅಥವಾ ಕ್ರಮ ಎದುರಿಸಿ | ಟಿಎಂಸಿ ನಾಯಕರಿಗೆ ಕೇಂದ್ರ ತನಿಖಾ ಏಜೆನ್ಸಿಗಳ ತಾಕೀತು : ಮಮತಾ ಬ್ಯಾನರ್ಜಿ ಆರೋಪ

Update: 2024-04-07 16:16 GMT

ಮಮತಾ ಬ್ಯಾನರ್ಜಿ | PC : PTI 

ಪುರುಲಿಯಾ(ಪಶ್ಚಿಮ ಬಂಗಾಳ): ‘ಒಂದೋ ಬಿಜೆಪಿಗೆ ಸೇರ್ಪಡೆಗೊಳ್ಳಿ, ಇಲ್ಲವೇ ಕ್ರಮವನ್ನು ಎದುರಿಸಲು ಸಿದ್ಧರಾಗಿ’ ಎಂದು ಟಿಎಂಸಿ ನಾಯಕರಿಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ತಾಕೀತು ಮಾಡುತ್ತಿವೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪಾದಿಸಿದ್ದಾರೆ.

ಪುರುಲಿಯಾ ಜಿಲ್ಲೆಯಲ್ಲಿ ರವಿವಾರ ಚುನಾವಣಾ ಪ್ರಚಾರ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ (ಈಡಿ),ಸಿಬಿಐ, ಎನ್ಐಎ ಹಾಗೂ ಆದಾಯ ತೆರಿಗೆ ಇಲಾಖೆಯು ಬಿಜೆಪಿಯ ‘ಕೈಗಳಂತೆ’ಕೆಲಸ ಮಾಡುತ್ತಿವೆ ಎಂದು ಆಕೆ ಆಪಾದಿಸಿದರು..

ಎನ್ಐಎ, ಈಡಿ, ಹಾಗೂ ಸಿಬಿಐಯಂತಹ ಏಜೆನ್ಸಿಗಳನ್ನು ಟಿಎಂಸಿ ನಾಯಕರಿಗೆ ಕಿರುಕುಳ ನೀಡಲು ಬಳಸಿಕೊಳ್ಳಲಾಗುತ್ತಿದೆ. ಯಾವುದೇ ಪೂರ್ವಭಾವಿ ಮಾಹಿತಿ ನೀಡದೆ ಅವರು ದಾಳಿಗಳನ್ನು ನಡೆಸುತ್ತಿದ್ದು, ಮನೆಯೊಳಗೆ ನುಗ್ಗುತ್ತಿದ್ದಾರೆ. ನಡುರಾತ್ರಿಯಲ್ಲಿ ಪ್ರತಿಯೊಬ್ಬರು ಮಲಗಿರುವಾಗ ಯಾರಾದರೂ ಮನೆಯೊಳಗೆ ಪ್ರವೇಶಿಸಿದಲ್ಲಿ ಮಹಿಳೆಯರು ಏನು ತಾನೆ ಮಾಡಲು ಸಾಧ್ಯವೆಂದು ಆಕೆ ಪ್ರಶ್ನಿಸಿದರು.

ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲು ಎನ್ಐಎ ಅಧಿಕಾರಿಗಳ ತಂಡವೊಂದು ಶನಿವಾರ ಭೂಪತಿನಗರಕ್ಕೆ ಆಗಮಿಸಿದಾಗ ಗುಂಪೊಂದು ಅವರ ಮೇಲೆ ದಾಳಿ ನಡೆಸಿದ ಘಟನೆಯನ್ನು ಅವರು ಪ್ರಸ್ತಾವಿಸಿದ್ದರು.

ಒಂದೋ ಬಿಜೆಪಿಗೆ ಸೇರಿಕೊಳ್ಳಿ ಅಥವಾ ಕಾನೂನುಕ್ರಮವನ್ನು ಎದುರಿಸಿ ಎಂದು ಕೇಂದ್ರೀಯ ತನಿಖಾ ಏಜೆನ್ಸಿಗಳು ನಮ್ಮ ನಾಯಕರು ಹಾಗೂ ಕಾರ್ಯಕರ್ತರಿಗೆ ಹೇಳುತ್ತಿವೆ’’ ಎಂಗು ಮಮತಾ ಆಪಾದಿಸಿದರು. ಯಾವುದೇ ರೀತಿಯ ಪ್ರಚೋದನೆಗೆ ಬಲಿಬೀಳದಂತೆ ಜನತೆಗೆ ಮನವಿ ಮಾಡಿದ ಅವರು, ರಾಮನವಮಿಯ ಸಂದರ್ಭದಲ್ಲಿ ಬಿಜೆಪಿಯು ಕೋಮುಭಾವನೆಗಳನ್ನು ಕೆರಳಿಸುತ್ತಿದೆ ಎಂದವರು ಹೇಳಿದರು.

ಎಂಜಿ ನರೇಗಾ ಹಾಗೂ ಪ್ರಧಾನಿ ಆವಾಸ ಯೋಜನೆಗಳ ಮೀಸಲಾಗಿದ್ದ ನಿಧಿಯನ್ನು ಕೇಂದ್ರ ಸರಕಾರವು ಪಶ್ಚಿಮಬಂಗಾಳಕ್ಕೆ ನೀಡದೆ ವಂಚಿಸುತ್ತಿದೆ. ಆದರೆ ಬಡವರಿಗೆ ಗೃಹನಿರ್ಮಾಣಕ್ಕೆ ರಾಜ್ಯ ಸರಕಾರವು 1.2 ಲಕ್ಷ ರೂ. ಒದಗಿಸಲಿದೆ ಎಂದವರು ಹೇಳಿದರು.

ಆ ಹಣವನ್ನು ಈಗ ನೀಡಲು ಚುನಾವಣಾ ಆಯೋಗದ ಅನುಮತಿಯಿಲ್ಲ. ಚುನಾವಣೆಯ ಆನಂತರ ಬಡವರಿಗಾಗಿ ತನ್ನ ಸರಕಾರ ಮನೆಗಳನ್ನು ನಿರ್ಮಿಸಲಿದೆ ಎಂದು ಮಮತಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News