ಪ್ರತಿಭಟನಾನಿರತ ರೈತರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಹೇರುವ ಕ್ರಮದಿಂದ ಹಿಂದೆ ಸರಿದ ಹರ್ಯಾಣ ಸರ್ಕಾರ
ಚಂಡೀಗಢ: ಪ್ರತಿಭಟನಾನಿರತ ರೈತರು ಮತ್ತು ಸಂಬಂಧಿತ ರೈತ ಯೂನಿಯನ್ ಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಹೇರಲಾಗುವುದು ಎಂದು ಅಂಬಾಲ ಪೊಲೀಸರು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ಕುರಿತು ಸ್ಪಷ್ಟೀಕರಣ ನೀಡಿದ ಅಂಬಾಲ ವಲಯ ಐಜಿಪಿ ಸಿಬಶ್ ಕಬಿರಾಜ್ ಈ ಕ್ರಮವನ್ನು ಮರುಪರಿಶೀಲಿಸಿ ವಾಪಸ್ ಪಡೆದುಕೊಳ್ಳಲಾಗಿದೆ ಎಂದಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಹೇರದೇ ಇರುವ ನಿರ್ಧಾರದ ಹಿಂದಿನ ಕಾರಣವನ್ನು ಹರ್ಯಾಣ ಸರ್ಕಾರ ನೀಡಿಲ್ಲ.
ಅಂಬಾಲ ಪೊಲೀಸರು ಈ ಹಿಂದೆ ಹೇಳಿಕೆ ನೀಡಿ ಫೆಬ್ರವರಿ 13 ರಿಂದ ರೈತರು ಮತ್ತವರ ಯೂನಿಯನ್ ಗಳ ತಮ್ಮ ದಿಲ್ಲಿ ಚಲೋ ಪ್ರತಿಭನೆಯ ಭಾಗವಾಗಿ ಶಂಭು ಗಡಿಯಲ್ಲಿ ಪೊಲೀಸರು ಇರಿಸಿದ್ದ ಬ್ಯಾರಿಕೇಡ್ಗಳನ್ನು ಒಡೆಯುವ ಪ್ರಯತ್ನಗಳನ್ನು ನಡೆಸುತ್ತಾ ಬಂದಿದ್ದಾರೆ. ಪೊಲೀಸರತ್ತ ಪ್ರತಿಭಟನಾಕಾರರು ಕಲ್ಲೆಸೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸುತ್ತಲೇ ಇದ್ದಾರೆ, ಈ ಅವಧಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯುಂಟು ಮಾಡಲಾಗಿದೆ,” ಎಂದು ಹೇಳಿದ್ದರು.