ಮಧ್ಯಪ್ರದೇಶ | 1500 ಐಫೋನ್‌ಗಳ ದರೋಡೆ ; ತನಿಖೆಗೆ 8 ಪೊಲೀಸ್ ತಂಡ ರಚನೆ

Update: 2024-09-01 14:13 GMT

ಸಾಂದರ್ಭಿಕ ಚಿತ್ರ

ಭೋಪಾಲ್ : ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಕಂಟೈನರ್ ಟ್ರಕ್‌ನಿಂದ 12 ಕೋಟಿ ರೂ. ಮೌಲ್ಯದ 1500 ಹೊಚ್ಚ ಹೊಸ ಐಫೋನ್‌ಗಳನ್ನು ದರೋಡೆಗೈದ ಪ್ರಕರಣವನ್ನು ಭೇದಿಸಲು ಎಂಟು ಪೊಲೀಸ್ ತಂಡಗಳನ್ನು ರಚಿಸಲಾಗಿದೆಯೆಂದು ಸಾಗರ್ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಕಾಸ್ ಕುಮಾರ್ ಸಹವಾಲ್ ತಿಳಿಸಿದ್ದಾರೆ.

ಐಫೋನ್‌ಗಳ ದರೋಡೆ ಕೃತ್ಯದಲ್ಲಿ ವಾರಿಶ್ ಎಂಬ ಹೆಸರಿನ ಭದ್ರತಾ ಉದ್ಯೋಗಿಯ ಪಾತ್ರವಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದವರು ಹೇಳಿದರು. ಹರ್ಯಾಣದ ಪಲ್ವಾಲ್‌ನಲ್ಲಿ ಆಗಸ್ಟ್ 15ರಂದು ಈ ಘಟನೆನಡೆದಿದ್ದು, ಆ ಬಳಿಕ ಆತ ನಿಗೂಢವಾಗಿ ನಾಪತ್ತೆಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಈ ಭದ್ರತಾ ಉದ್ಯೋಗಿಯನ್ನು ಹರ್ಯಾಣದ ಪಹ್ವಾಲ್‌ನ ಬಹುರಾಷ್ಟ್ರೀಯ ಕಂಪನಿಯು ಪೂರ್ವಭಾವಿಯಾಗಿ ಪೊಲೀಸ್ ದೃಢೀಕರಣವಿಲ್ಲದೆಯೇ ಆತನನ್ನು ನಿಯೋಜಿಸಿತ್ತು. ನಾಪತ್ತೆಯಾಗಿರುವ ಭದ್ರತಾ ಉದ್ಯೋಗಿಯ ವಿರುದ್ಧ ದರೋಡೆಯ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಸಹವಾಲ್ ತಿಳಿಸಿದ್ದಾರೆ.

ತನಗೆ ಮಾದಕದ್ರವ್ಯವನ್ನು ನೀಡಿದ ದರೋಡೆಕೋರರು, ಆನಂತರ ತನ್ನನ್ನು ಹಗ್ಗದಿಂದ ಕಟ್ಟಿಹಾಕಿದ್ದರೆಂದು ಟ್ರಕ್‌ ಚಾಲಕ ಆಪಾದಿಸಿದ್ದಾನೆನೆ. ಆತನು ಕೂಡಾ ಹರ್ಯಾಣದ ಮೇವಾಟ್ ಪ್ರದೇಶದವನೆಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News