ಮಹಾರಾಷ್ಟ್ರ: ಮರಾಠಾವಾಡದಲ್ಲಿ 6 ತಿಂಗಳಲ್ಲಿ 483 ರೈತರ ಆತ್ಮಹತ್ಯೆ

Update: 2023-07-24 18:12 GMT

ಸಾಂದರ್ಭಿಕ ಚಿತ್ರ.

ಔರಂಗಾಬಾದ್: ಮಹಾರಾಷ್ಟ್ರದ ಮರಾಠವಾಡ ವಲಯದಲ್ಲಿ ಈ ವರ್ಷದ ಮೊದಲ ಆರು ತಿಂಗಳಲ್ಲಿ ಒಟ್ಟು 483 ರೈತರು ಆತ್ಮಹತ್ಯೆಗೆ ಮಾಡಿಕೊಂದ್ದಾರೆ ಎಂದು ರಾಜ್ಯ ಕಂದಾಯ ಇಲಾಖೆಯ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಜನವರಿಯಲ್ಲಿ 62, ಫೆಬ್ರವರಿಯಲ್ಲಿ 74, ಮಾರ್ಚ್ ನಲ್ಲಿ 78, ಎಪ್ರಿಲ್ ನಲ್ಲಿ 89ಕ್ಕೆ ನಿರಂತರ ಏರಿಕೆಯಾಗಿದೆ. ಮೇಯಲ್ಲಿ 88ಕ್ಕೆ ತುಸು ಇಳಿಕೆಯಾಗಿದೆ. ಜೂನ್ ನಲ್ಲಿ ಮತ್ತೆ 92ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಒಟ್ಟು 483 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಬೀಡ್ ಜಿಲ್ಲೆಯ 128, ಉಸ್ಮಾನಾಬಾದ್ನ 90 ಹಾಗೂ ನಾಂದೇಡ್ ನ 89 ರೈತರು ಸೇರಿದ್ದಾರೆ ಎಂದು ಔರಂಗಾಬಾದ್ ವಿಭಾಗವನ್ನು ಒಳಗೊಳ್ಳುವ ಕಂದಾಯ ಇಲಾಖೆಯ ವರದಿ ಹೇಳಿದೆ. ಜೂನ್ ನಲ್ಲಿ 92 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಲ್ಲಿ ಬೀಡ್ ನ 30 ಹಾಗೂ ನಾಂದೇಡ್ 24 ರೈತರು ಸೇರಿದ್ದಾರೆ.

ಈ ಒಟ್ಟು 483 ಪ್ರಕರಣಗಳಲ್ಲಿ 304 ಪ್ರಕರಣಗಳು ಪರಿಹಾರಕ್ಕೆ ಅರ್ಹವಾಗಿರುವುದು ಪತ್ತೆಯಾಗಿವೆ. 112 ಪ್ರಕರಣಗಳ ತನಿಖೆ ನಡೆಯುತ್ತಿವೆ. 67 ಪ್ರಕರಣಗಳು ಅನರ್ಹವಾಗಿವೆ.

ಇದುವರೆಗೆ ಕೇವಲ 10 ಕುಟುಂಬಗಳು ಮಾತ್ರ ಪರಿಹಾರಕ್ಕೆ ಅರ್ಹವಾಗಿವೆ. ಈ ಕುಟುಂಬಗಳಿಗೆ 30 ಸಾವಿರ ರೂ.ನಗದನ್ನು ಪರಿಹಾರವಾಗಿ ನೀಡಲಾಗಿದೆ. 70 ಸಾವಿರ ರೂ.ವನ್ನು ಸ್ಥಿರ ಠೇವಣಿಯಾಗಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News