ಮಹಾರಾಷ್ಟ್ರ | ಈ ವರ್ಷ 1,267 ರೈತರ ಆತ್ಮಹತ್ಯೆ

Update: 2024-07-21 14:36 GMT

Photo Credit: PTI

ಮುಂಬೈ : ಮಹಾರಾಷ್ಟ್ರದಲ್ಲಿ ಈ ವರ್ಷದ ಜನವರಿಯಿಂದ ಜೂನ್ ವರೆಗಿನ ಆರು ತಿಂಗಳುಗಳ ಅವಧಿಯಲ್ಲಿ 1,267 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ವಿದರ್ಭ ಪ್ರದೇಶದ ಅಮರಾವತಿ ವಿಭಾಗವೊಂದರಲ್ಲೇ 557 ಆತ್ಮಹತ್ಯೆಗಳು ವರದಿಯಾಗಿವೆ.

ರಾಜ್ಯ ಸರಕಾರದ ವರದಿಯಂತೆ ಛತ್ರಪತಿ ಸಂಭಾಜಿನಗರ ವಿಭಾಗವು 430 ಆತ್ಮಹತ್ಯೆಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ನಾಸಿಕ್(137),ನಾಗ್ಪುರ(130) ಮತ್ತು ಪುಣೆ(13) ವಿಭಾಗಗಳು ನಂತರದ ಸ್ಥಾನಗಳಲ್ಲಿವೆ. ಕರಾವಳಿ ಕೊಂಕಣ ವಿಭಾಗದಲ್ಲಿ ಯಾವುದೇ ಆತ್ಮಹತ್ಯೆ ವರದಿಯಾಗಿಲ್ಲ.

ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್ಸಿಆರ್ಬಿ)ದ ದತ್ತಾಂಶಗಳಂತೆ 2022ರಲ್ಲಿ ದೇಶದಲ್ಲಿ ಸಂಭವಿಸಿದ್ದ ರೈತರ ಆತ್ಮಹತ್ಯೆಗಳ ಪೈಕಿ ಶೇ.37.6ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲೇ ದಾಖಲಾಗಿದ್ದವು.

ಎನ್ಸಿಆರ್ಬಿ ಪ್ರಕಾರ,2022ರಲ್ಲಿ ದೇಶದಲ್ಲಿ 5,207 ಕೃಷಿಕರು ಮತ್ತು 6,083 ಕೃಷಿ ಕಾರ್ಮಿಕರು ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಒಟ್ಟು 11,290 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ವರ್ಷ ದೇಶದಲ್ಲಿ ಒಟ್ಟು 1,70,924 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು,ಇದರಲ್ಲಿ ಕೃಷಿ ಕ್ಷೇತ್ರದ ಪಾಲು ಶೇ.6.6ರಷ್ಟಿತ್ತು.

2021ರಲ್ಲಿ 5,318 ಕೃಷಿಕರು ಮತ್ತು 5,563 ಕೃಷಿ ಕಾರ್ಮಿಕರು ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಒಟ್ಟು 10,881 ಆತ್ಮಹತ್ಯೆಗಳು ವರದಿಯಾಗಿದ್ದು,ಈ ಪೈಕಿ 37.3ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದ್ದವು.

ಎನ್ಸಿಆರ್ಬಿ ದತ್ತಾಂಶಗಳಂತೆ 2021ರಲ್ಲಿ ದೇಶದಲ್ಲಿ ಒಟ್ಟು 1,64,033 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು,ಇದರಲ್ಲಿ ಕೃಷಿ ಕ್ಷೇತ್ರದ ಪಾಲು ಶೇ.6.6ರಷ್ಟಿತ್ತು.

2020ರಲ್ಲಿ ದೇಶದಲ್ಲಿ 5,579 ಕೃಷಿಕರು ಮತ್ತು 5,098 ಕೃಷಿ ಕಾರ್ಮಿಕರು ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಒಟ್ಟು 10,677 ಆತ್ಮಹತ್ಯೆಗಳು ವರದಿಯಾಗಿದ್ದು,ಈ ಪೈಕಿ ಶೇ.37.5ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದ್ದವು. ಆ ವರ್ಷ ದೇಶದಲ್ಲಿ ಒಟ್ಟು 1,53,052 ಆತ್ಮಹತ್ಯೆಗಳು ಸಂಭವಿಸಿದ್ದು,ಈ ಪೈಕಿ ಶೇ.7ರಷ್ಟು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ್ದವು.

ಪ್ರಾಸಂಗಿಕವಾಗಿ,ಮಹಾರಾಷ್ಟ್ರವು ದೇಶದ ಜಿಡಿಪಿಯಲ್ಲಿ ಅತ್ಯಂತ ಹೆಚ್ಚಿನ ಪಾಲನ್ನೂ ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News