ಭಾರತದಲ್ಲಿನ ಬಹುತೇಕ ಕುಶಲಕರ್ಮಿ ಉದ್ಯೋಗಗಳ ಮಾಸಿಕ ವೇತನ 20 ಸಾವಿರ ರೂ.ಗಿಂತಲೂ ಕಡಿಮೆ : ವರದಿ

Update: 2024-08-17 14:33 GMT

Photo : Meta AI

ಮುಂಬೈ : ಭಾರತದಲ್ಲಿನ ಕುಶಲಕರ್ಮಿ ಉದ್ಯೋಗಿಗಳು ಮಾಸಿಕ 20 ಸಾವಿರ ರೂ. ಅಥವಾ ಅದಕ್ಕಿಂತಲೂ ಕಡಿಮೆ ಪ್ರಮಾಣದ ವೇತನವನ್ನು ಪಡೆಯುತ್ತಿದ್ದಾರೆ. ದೊಡ್ಡ ಪ್ರಮಾಣದ ಉದ್ಯೋಗಿಗಳು ಹಣಕಾಸು ಮುಗ್ಗಟ್ಟಿಗೆ ಸಿಲುಕಿದ್ದು, ಅವರು ವಸತಿ, ಆರೋಗ್ಯ ಸೇವೆ ಹಾಗೂ ಶಿಕ್ಷಣದಂಥ ಅತ್ಯಗತ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹೆಣಗುತ್ತಿದ್ದಾರೆ ಎಂದು ಅಧ್ಯಯನ ವರದಿಯೊಂದರಲ್ಲಿ ಹೇಳಲಾಗಿದೆ.

ಶೇ.57.63ಕ್ಕಿಂತ ಹೆಚ್ಚು ಕುಶಲಕರ್ಮಿ ಉದ್ಯೋಗಿಗಳ ವೇತನವು ಮಾಸಿಕ 20 ಸಾವಿರ ರೂ. ಅಥವಾ ಅದರೊಳಗಿದ್ದು, ಬಹುತೇಕ ಉದ್ಯೋಗಿಗಳು ಕನಿಷ್ಠ ವೇತನದ ಸನಿಹದಲ್ಲಿದ್ದಾರೆ ಎಂದು ತಾಂತ್ರಿಕ ಕುಶಲಕರ್ಮಿಗಳ ನೇಮಕಾತಿ ವೇದಿಕೆ WorkIndia ತನ್ನ ವರದಿಯಲ್ಲಿ ಹೇಳಿದೆ.

ಇದರೊಂದಿಗೆ, ಶೇ. 29.34ರಷ್ಟು ಕುಶಲಕರ್ಮಿ ಉದ್ಯೋಗಿಗಳು ಸಾಧಾರಣ ಗಳಿಕೆಯ ಪರಿಧಿಯಲ್ಲಿದ್ದು, ಅವರ ವೇತನವು ಮಾಸಿಕ 20 ಸಾವಿರ ರೂ.- 40 ಸಾವಿರ ರೂ. ಒಳಗಿದೆ ಎಂದು ಹೇಳಲಾಗಿದೆ.

ಈ ಪ್ರವರ್ಗದಲ್ಲಿರುವ ಉದ್ಯೋಗಿಗಳು ಕೊಂಚ ಮಟ್ಟಿನ ಸುಧಾರಿತ ಹಣಕಾಸು ಭದ್ರತೆಯನ್ನು ಹೊಂದಿದ್ದರೂ, ಅವರು ಆರಾಮದಾಯಕ ಜೀವನ ಗುಣಮಟ್ಟವನ್ನು ಸಾಧಿಸುವಲ್ಲಿ ತುಂಬಾ ದೂರ ಉಳಿದಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಈ ಉದ್ಯೋಗಿಗಳ ಪೈಕಿ ಕಡಿಮೆ ಪ್ರಮಾಣದ (ಶೇ 10.71) ಉದ್ಯೋಗಿಗಳು ಮಾತ್ರ ಮಾಸಿಕ 40 ಸಾವಿರ -60 ಸಾವಿರ ರೂ.ವರೆಗಿನ ವೇತನಗಳನ್ನು ಪಡೆಯುತ್ತಿದ್ದಾರೆ ಎಂದೂ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

ಈ ಆದಾಯ ವ್ಯಾಪ್ತಿಯು ಅಗತ್ಯ ಅವಶ್ಯತಕತೆಗಳನ್ನು ಪೂರೈಸಬಲ್ಲವಾದರೂ, ಉಳಿತಾಯ ಅಥವಾ ಹೂಡಿಕೆಗೆ ಯಾವುದೇ ಸಣ್ಣ ಅವಕಾಶವನ್ನೂ ಒದಗಿಸುತ್ತಿಲ್ಲ. ಇದರಿಂದ ಕುಶಲಕರ್ಮಿ ಉದ್ಯೋಗಿಗಳ ಪೈಕಿ ಬಹು ದೊಡ್ಡ ಭಾಗವು ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಕೇವಲ ಶೇ. 2.31ರಷ್ಟು ಕುಶಲಕರ್ಮಿ ಉದ್ಯೋಗಿಗಳು ಮಾತ್ರ 60 ಸಾವಿರ ರೂ.ಗಿಂತ ಹೆಚ್ಚಿನ ವೇತನ ಪಡೆಯುತ್ತಿದ್ದು, ಈ ವಲಯದಲ್ಲಿ ಉತ್ತಮ ವೇತನ ಪಡೆಯುವ ಅವಕಾಶವು ಗಮನಾರ್ಹವಾಗಿ ಅತಿ ಸಣ್ಣ ಪ್ರಮಾಣದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News