ಅಮೆರಿಕಾದಿಂದ ಕೇರಳಕ್ಕೆ ಮರಳಿದ್ದ ವ್ಯಕ್ತಿ ಮನೆಗೆ ತೆರಳುವಾಗ ಕಾರು ಅಪಘಾತದಲ್ಲಿ ಮೃತ್ಯು

Update: 2024-09-04 07:55 GMT

Image Credit: onmanorama.com

ಕೋಯಿಕ್ಕೋಡ್: ಬುಧವಾರ ಅಮೆರಿಕಾದಿಂದ ಕೇರಳಕ್ಕೆ ಹಿಂದಿರುಗಿದ್ದ ವ್ಯಕ್ತಿಯೊಬ್ಬರು, ಕಣ್ಣೂರು ಜಿಲ್ಲೆಯಲ್ಲಿರುವ ತಲಸ್ಸೇರಿಯಲ್ಲಿನ ತಮ್ಮ ನಿವಾಸಕ್ಕೆ ತೆರಳುವಾಗ ಮಾರ್ಗಮಧ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಶಿಜಿಲ್ (40) ಎಂದು ಗುರುತಿಸಲಾಗಿದ್ದು, ಕಾರಿಪುರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ, ಟ್ಯಾಕ್ಸಿಯೊಂದರಲ್ಲಿ ತಮ್ಮ ನಿವಾಸಕ್ಕೆ ತೆರಳುವಾಗ ಇಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ವಡಕರದ ಮುಕ್ಕಳಿ ಬಳಿ ಈ ಅಪಘಾತ ಸಂಭವಿಸಿದೆ ಎಂದು ಚೊಂಬಾಲ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಅಪಘಾತದಲ್ಲಿ ತಲಸ್ಸೇರಿ ನಿವಾಸಿಯಾದ ಜೂಬಿ (38) ಕೂಡಾ ಮೃತಪಟ್ಟಿದ್ದಾರೆ.

ಸುದ್ದಿ ವಾಹಿನಿಗಳು ಪ್ರಸಾರ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಎದುರಿನಿಂದ ಬರುತ್ತಿದ್ದ ಟ್ರಕ್ ಗೆ ಟ್ಯಾಕ್ಸಿ ಮುಖಾಮುಖಿ ಢಿಕ್ಕಿ ಹೊಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News