ಮಹಿಳೆಯರ ವಿರುದ್ಧ ದ ದೌರ್ಜನ್ಯದ ಬಗ್ಗೆ ಉತ್ತರಿಸದ ಮಣಿಪುರ ಅಧಿಕಾರಿಗಳು: ರಾಷ್ಟ್ರೀಯ ಮಹಿಳಾ ಆಯೋಗ ಆರೋಪ

Update: 2023-07-21 17:13 GMT

ರೇಖಾ ಶರ್ಮಾ | Photo: PTI 

ಹೊಸದಿಲ್ಲಿ: ಮಣಿಪುರದಲ್ಲಿ ಮಹಿಳೆಯರ ವಿರುದ್ಧ ಹಿಂಸಾಚಾರದ ಘಟನೆಗಳಿಗೆ ಬಗ್ಗೆ ತಾನು ಕಳೆದ ಮೂರು ತಿಂಗಳುಗಳಲ್ಲಿ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿದ್ದು, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲವೆಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಶುಕ್ರವಾರ ತಿಳಿಸಿದ್ದಾರೆ.

ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಮಹಿಳೆಯರನ್ನು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆಯ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಜೂನ್ 12ರಂದು ದೂರೊಂದು ಬಂದಿತ್ತಾದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲವೆಂದದು ಕೆಲವು ಮಾಧ್ಯಮಗಲಲ್ಲಿ ಪ್ರಕಟವಾದ ವರದಿಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಮೇ 4ರಂದು ಮಣಿಪುರದ ಗ್ರಾಮವೊಂದರಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಘಟನೆಯ ವೀಡಿಯೊ ಜುಲೈ 19ರಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಗೊಂಡು, ಭಾರೀ ಕೋಲಾಹಲವನ್ನು ಸೃಷ್ಟಿಸಿತ್ತು. ಘಟನೆಯ ಬಗ್ಗೆ ಆಯೋಗಕ್ಕೆ ಈ ಮೊದಲು ಯಾವುದೇ ವರದಿ ಲಭ್ಯವಾಗಿರುವುದನ್ನು ರೇಖಾ ಶರ್ಮಾ ಅವರು ನಿರಾಕರಿಸಿದರು.

ಆದರೆ, ಮಣಿಪುರದ ಮಹಿಳೆಯರ ವಿರುದ್ಧ ನಡೆದಿರುವ ಇತರ ಹಿಂಸಾಚಾರದ ಘಟನೆಗಳ ಬಗ್ಗೆ ತನಗೆ ದೂರುಗಳು ಬಂದಿದ್ದವು. ಆ ಬಗ್ಗೆ ತಾನು ಮಣಿಪುರದ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದ ಹೊರತಾಗಿಯೂ ಯಾವುದೇ ಉತ್ತರ ದೊರೆತಿಲ್ಲವೆಂದು ಅವರು ಹೇಳಿದರು.

ಈ ಬಗ್ಗೆ ರಾಜ್ಯದ ಇಲಾಖೆಗಳಿಗೆ ತಾನು ಬರೆದಿದ್ದ ಪತ್ರಗಳನು ಕೂಡಾ ಶರ್ಮಾ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

‘‘ ಈ ದೂರುಗಳ ನಿಖರತೆಯನ್ನು ನಾವು ದೃಢಪಡಿಸಿಕೊಳ್ಳಬೇಕಾಗಿತ್ತು.ನಮಗೆ ಬಂದಿರುವ ದೂರುಗಳು ಮಣಿಪುರದಿಂದ ಬಂದಿದ್ದವಾಗಿರಲಿಲ್ಲ. ಅವುಗಳಲ್ಲಿ ಕೆಲವು ಭಾರತದ್ದೂ ಆಗಿರಲಿಲ್ಲ. ಆದರೂ ನಾವು ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದ್ದೆವು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ. ಆದರೆ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆ ವಿಡಿಯೋ ಬಹಿರಂಗಗೊಂಡ ಬಳಿಕ ನಾವು ಸ್ವಯಂಪ್ರೇರಿತವಾಗಿ ಕ್ರಮವನ್ನು ಕೈಗೊಳ್ಳಬೇಕಾಯಿತು ಎಂದರು.

ಮಣಿಪುರ ಹಿಂಸಾಚಾರದ ವೇಳೆ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಮೇ 18,ಮೇ 29 ಹಾಗೂ ಜೂನ್ 19ರಂದು ಆಯೋಗವು ಸಂಬಂಧ ಪಟ್ಟ ಪತ್ರಗಳನ್ನು ಬರೆಯಲಾಗಿದೆಯೆಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News