ಮಣಿಪುರದಲ್ಲಿ ಸಮದಾಯಗಳನ್ನು ಸಂಘಟಿಸಲು ಅಧಿಕಾರ ಹಂಚಿಕೆ ವ್ಯವಸ್ಥೆಯ ಅಗತ್ಯತೆ ಇದೆ: ನೇತಾಜಿ ಸೋದರ ಸಂಬಂಧಿ

Update: 2023-10-01 17:38 GMT

Photo : PTI

ಕೋಲ್ಕತಾ: ಮಣಿಪುರದ ಪರಿಸ್ಥಿತಿಯನ್ನು ‘ದುರಂತಮಯ’ ಎಂದು ವ್ಯಾಖ್ಯಾನಿಸಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೋದರ ಸಂಬಂಧಿ ಪ್ರೊ. ಸುಗತಾ ಬೋಸ್, ಮೈತೈ, ಕುಕಿ ಹಾಗೂ ನಾಗಾ ಸಮುದಾಯಗಳನ್ನು ಸಂಘಟಿಸುವ ಸಲುವಾಗಿ ಮಣಿಪುರದಲ್ಲಿ ‘‘ಅಧಿಕಾರ ಹಂಚಿಕೆ ವ್ಯವಸ್ಥೆ’’ಯನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದ್ದಾರೆ.  

ಈ ಹಿಂದೆ ಲೋಕಸಭೆಯ ಸಂಸದರಾಗಿದ್ದ ಬೋಸ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ಮೂರು ಸಮುದಾಯಗಳಿಗೆ ಸೇರಿದ ಸದಸ್ಯರು 1944ರಲ್ಲಿ ನೇತಾಜಿ ಅವರ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ಎ)ಗೆ ಸೇರಿದ್ದರು. ಬಿಷ್ಣುಪುರ ಹಾಗೂ ಉಖ್ರುಲ್ ಜಿಲ್ಲೆಗಳ ಯುದ್ಧಭೂಮಿಗಳಲ್ಲಿ  ನಡೆದ ಯುದ್ಧದಲ್ಲಿ ಸಂಘಟಿತರಾಗಿ ಹೋರಾಡಿದ್ದರು ಎಂದರು. 

ಮೂರು ಸಮುದಾಯಗಳನ್ನು ಮತ್ತೆ ಸಂಘಟಿಸಲು ಈ ಹಿಂದೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ಬ್ರಿಟಿಷರ ವಿರುದ್ಧ ನಡೆದ ಶಸಸ್ತ್ರ ಹೋರಾಟದ ಪರಂಪರೆಯನ್ನು ಅನುಸರಿಸಬೇಕಾದ ಅಗತ್ಯತೆ ಇದೆ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಇತಿಹಾಸ ಪೀಠದ ಮುಖ್ಯಸ್ಥರಾಗಿರುವ ಬೋಸ್ ಅವರು ತಿಳಿಸಿದ್ದಾರೆ.  

‘‘ಮಣಿಪುರದ ಪರಿಸ್ಥಿತಿ ದುರಂತಮಯವಾಗಿದೆ. ಅಲ್ಪಾವಧಿ ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯ ಇನ್ನೊಂದು ಸಮುದಾಯದ ವಿರುದ್ಧ ಕತ್ತಿ ಮಸೆಯುತ್ತಿದೆ. ಈ ರೀತಿಯ ರಾಜಕೀಯ ಆಟವನ್ನು ನಿಲ್ಲಿಸಬೇಕು’’ ಎಂದು ಅವರು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News