ಮಣಿಪುರ: ಯೋಧನ ಮೃತದೇಹ ಪತ್ತೆ

Update: 2023-09-17 17:09 GMT

                                                               Photo: NDTV 

ಇಂಫಾಲ : ಭಾರತೀಯ ಸೇನೆಯ ಯೋಧನೋರ್ವನ ಮೃತದೇಹ ಮಣಿಪುರದ ಇಂಫಾಲ ಪೂರ್ವ ಜಿಲ್ಲೆಯ ಖುನಿಗ್ತೆಕ್ ಗ್ರಾಮದಲ್ಲಿ ರವಿವಾರ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ ಯೋಧನನ್ನು ಕಂಗ್‌ಪೊಕ್ಪಿ ಜಿಲ್ಲೆಯ ಲೈಮಾಖೋಂಗ್‌ನಲ್ಲಿರುವ ಸೇನೆಯ ರಕ್ಷಣಾ ಭದ್ರತಾ ಪಡೆಯ (ಡಿಎಸ್‌ಸಿ) ತುಕುಡಿಯ ಸಿಪಾಯಿ ಸೆರ್ಟೊ ಥಂಗ್‌ಥಾಂಗ್ ಕೋಮ್ ಎಂದು ಗುರುತಿಸಲಾಗಿದೆ.

ಸಿಪಾಯಿ ಕೋಮ್ ಅವರು ರಜೆಯಲ್ಲಿ ಮನೆಯಲ್ಲಿದ್ದಾಗ ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಅಪರಿಚಿತ ಶಸಸ್ತ್ರಧಾರಿಗಳು ಅವರನ್ನು ಅಪಹರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‘ಮನೆಯ ಜಗಲಿಯಲ್ಲಿ ನಾನು ಮತ್ತು ತಂದೆ ಕೆಲಸ ಮಾಡುತ್ತಿರುವಾಗ ಮೂವರು ವ್ಯಕ್ತಿಗಳು ಪ್ರವೇಶಿಸಿದರು’’ ಎಂದು ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿರುವ ಸಿಪಾಯಿ ಕೋಮ್ ಅವರ 10 ವರ್ಷದ ಪುತ್ರ ತಿಳಿಸಿದ್ದಾನೆ.

ಅಪರಿಚಿತ ಶಸಸ್ತ್ರಧಾರಿಗಳು ಸಿಪಾಯಿ ಕೋಮ್ ಅವರ ಹಣೆಗೆ ಪಿಸ್ತೂಲು ಗುರಿ ಇರಿಸಿ ಅವರನ್ನು ವಾಹನವೊಂದರಲ್ಲಿ ಅಪಹರಿಸಿದ್ದರು ಎಂದು ಕೋಮ್ ಅವರ ಪುತ್ರನನ್ನು ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ.

‘‘ರವಿವಾರ ಮುಂಜಾನೆ ವರೆಗೆ ಸಿಪಾಯಿ ಕೋಮ್ ಅವರ ಸುದ್ದಿ ಇರಲಿಲ್ಲ. ಬೆಳಗ್ಗೆ ಸುಮಾರು 9.30ಕ್ಕೆ ಅವರ ಮೃತದೇಹ ಇಂಫಾಲ ಪೂರ್ವ ಸೊಗೊಲ್‌ಮಂಗ್ ಪಿಎಸ್‌ನ ವ್ಯಾಪ್ತಿಯಲ್ಲಿ ಬರುವ ಮೊಂಗ್‌ಜಾಮ್‌ನ ಪೂರ್ವದಲ್ಲಿರುವ ಖುನಿಂಗ್‌ತೆಕ್ ಗ್ರಾಮದಲ್ಲಿ ಪತ್ತೆಯಾಯಿತು. ಮೃತದೇಹದ ಗುರುತನ್ನು ಅವರ ಸಹೋದರ ಹಾಗೂ ಭಾವ ದೃಢಪಡಿಸಿದ್ದಾರೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News