ವಕ್ಫ್ ಮಸೂದೆ: 572 ತಿದ್ದುಪಡಿಗಳನ್ನು ಸೂಚಿಸಿದ ಜಂಟಿ ಸದನ ಸಮಿತಿ ಸದಸ್ಯರು

Update: 2025-01-27 11:24 IST
Photo of Chairman of JPC on ‘Waqf Amendment Bill’ Jagdambika Pal

Photo credit: PTI

  • whatsapp icon

ಹೊಸದಿಲ್ಲಿ : ಜಂಟೀ ಸಂಸದೀಯ ಸಮಿತಿಯ ಸದಸ್ಯರು ಉದ್ದೇಶಿತ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ 572 ತಿದ್ದುಪಡಿಗಳನ್ನು ಸೂಚಿಸಿದ್ದಾರೆ.

ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ಅಧ್ಯಕ್ಷತೆಯ ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸದನ ಸಮಿತಿಯ ವಿಚಾರಣೆ ಕೊನೆಯ ಹಂತಕ್ಕೆ ತಲುಪುತ್ತಿದ್ದಂತೆ ರವಿವಾರ ತಡರಾತ್ರಿ ತಿದ್ದುಪಡಿಗಳ ಸಮಗ್ರ ಪಟ್ಟಿಯನ್ನು ಅವಲೋಕನ ಮಾಡಲಾಗಿದೆ.

ಸಮಿತಿಯು ಸೋಮವಾರ ನಡೆಯುವ ಸಭೆಯಲ್ಲಿ ತಿದ್ದುಪಡಿಗಳ ಕುರಿತು ಚರ್ಚಿಸಲಿದೆ.

ಬಿಜೆಪಿ ಮತ್ತು ವಿರೋಧ ಪಕ್ಷದ ಸದಸ್ಯರು ಮಸೂದೆಗೆ ತಿದ್ದುಪಡಿಗಳನ್ನು ಈಗಾಗಲೇ ಸಲ್ಲಿಸಿದ್ದಾರೆ. ತಿದ್ದುಪಡಿಗಳನ್ನು ಸಲ್ಲಿಸಿದ ಸದಸ್ಯರ ಪಟ್ಟಿಯಲ್ಲಿ ಬಿಜೆಪಿಯ ಯಾವುದೇ ಮಿತ್ರಪಕ್ಷಗಳು ಇಲ್ಲ ಎನ್ನುವುದು ವಿಶೇಷ.

ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಆಗಸ್ಟ್ 8 ರಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಪರಿಚಯಿಸಿದ ನಂತರ ಅದನ್ನು ಸಂಸತ್ತಿನ ಜಂಟೀ ಸದನ ಸಮಿತಿಗೆ ವಹಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News