ಮೋದಿ ಸರಕಾರವು ಗಾಂಧಿಯನ್ನು, ಅವರ ಹೆಸರಿನ ನರೇಗಾ ಯೋಜನೆಯನ್ನು ಇಷ್ಟಪಡುವುದಿಲ್ಲ: ತಮಿಳುನಾಡು ಸಿಎಂ ಸ್ಟಾಲಿನ್

Update: 2025-03-29 16:17 IST
ಮೋದಿ ಸರಕಾರವು ಗಾಂಧಿಯನ್ನು, ಅವರ ಹೆಸರಿನ ನರೇಗಾ ಯೋಜನೆಯನ್ನು ಇಷ್ಟಪಡುವುದಿಲ್ಲ: ತಮಿಳುನಾಡು ಸಿಎಂ ಸ್ಟಾಲಿನ್

ಎಂ.ಕೆ.ಸ್ಟಾಲಿನ್ (Photo: PTI)

  • whatsapp icon

ಚೆನ್ನೈ: ಶನಿವಾರ ತಮಿಳುನಾಡಿನಾದ್ಯಂತ ನೂರಾರು ಡಿಎಂಕೆ ಕಾರ್ಯಕರ್ತರ ಬೃಹತ್ ಪ್ರತಿಭಟನೆಗಳ ನಡುವೆಯೇ ಪಕ್ಷದ ಅಧ್ಯಕ್ಷ ಹಾಗೂ ರಾಜ್ಯದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ನರೇಗಾ ಕಾರ್ಮಿಕರ ಸಂಕಷ್ಟಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ನರೇಗಾ) ಕಾರ್ಮಿಕರಿಗೆ ಬಾಕಿ ವೇತನಗಳನ್ನು ಬಿಡುಗಡೆಗೊಳಿಸದ್ದಕ್ಕಾಗಿ ಬಿಜೆಪಿ ಸರಕಾರವನ್ನು ಟೀಕಿಸಿದ ಸ್ಟಾಲಿನ್, ಅವರು ಮಹಾತ್ಮಾ ಗಾಂಧಿಯವರನ್ನು ಮತ್ತು ಅವರ ಹೆಸರಿನಲ್ಲಿಯ 100 ದಿನಗಳ ಉದ್ಯೋಗ ಯೋಜನೆಯನ್ನು ಇಷ್ಟ ಪಡುವುದಿಲ್ಲ ಎಂದು ಹೇಳಿದರು.

ಯುಪಿಎ ಸರಕಾರವು ಭಾರತೀಯ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಮತ್ತು ಜೀವನಾಡಿಯಾಗಿ ರೂಪಿಸಿದ್ದ ನರೇಗಾ ಯೋಜನೆಯನ್ನು ನಾಶಗೊಳಿಸಲು ನಿರ್ದಯಿ ಬಿಜೆಪಿ ಮುಂದಾಗಿದೆ. ಒಂದು ಸಹಿಯಿಂದ ಕಾರ್ಪೊರೇಟ್‌ಗಳ ಲಕ್ಷಾಂತರ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡುತ್ತಿರುವಾಗ ಉರಿಬಿಸಿಲಿನಲ್ಲಿ ತಮ್ಮ ಬೆವರು ಹರಿಸಿ ಶ್ರಮಿಸಿದ ಬಡವರ ವೇತನಗಳನ್ನು ಬಿಡುಗಡೆ ಮಾಡಲು ಹಣವೇಕಿಲ್ಲ? ಹಣವಿಲ್ಲವೇ ಅಥವಾ ಮನಸ್ಸಿಲ್ಲವೇ ಎಂದು ಸ್ಟಾಲಿನ್ ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ತಮಿಳುನಾಡಿನಾದ್ಯಂತ ಇಂದಿನ ಪ್ರತಿಭಟನೆಯ ಮೂಲಕ ಡಿಎಂಕೆ ಸದಸ್ಯರು ಮತ್ತು ಬಡಜನರ ಧ್ವನಿಗಳು ಹೊಸದಿಲ್ಲಿಯನ್ನು ತಲುಪಬೇಕು ಎಂದಿರುವ ಅವರು,ಸ್ಯಾಡಿಸ್ಟ್ ಬಿಜೆಪಿ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಕುಟುಕಿದ್ದಾರೆ.

ಕೇಂದ್ರ ಸರಕಾರವನ್ನು ಖಂಡಿಸಿ ಮತ್ತು ನರೇಗಾ ಕಾರ್ಮಿಕರಿಗೆ ಬಾಕಿಯಿರುವ 4,034 ಕೋ.ರೂ.ಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ರಾಜ್ಯದ ಸುಮಾರು 1,170 ಸ್ಥಳಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಮಹಿಳೆಯರೂ ಭಾಗವಹಿಸಿದ್ದರು.

ನರೇಗಾ ಫಲಾನುಭವಿಗಳಿಗೆ ಬಾಕಿ ವೇತನಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರವನ್ನು ಆಗ್ರಹಿಸಲು ಶನಿವಾರ ದೇಶವ್ಯಾಪಿ ಪ್ರತಿಭಟನೆಗಳಿಗೆ ಸ್ಟಾಲಿನ್ ಕರೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News