ಭಾರತದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ 5 ವರ್ಷದ ಟಿವಿ, ಡಿಜಿಟಲ್ ಪ್ರಸಾರ ಹಕ್ಕು ಮುಖೇಶ್ ಅಂಬಾನಿ ಒಡೆತನದ ವಿಯಾಕಾಮ್18 ತೆಕ್ಕೆಗೆ

Update: 2023-08-31 17:06 GMT

 Mukesh Ambani |Photo: PTI \ Viacom | Photo: viacom18.com 

ಮುಂಬೈ: 2023-28ರ ಅವಧಿಯಲ್ಲಿ ಭಾರತದಲ್ಲಿ ಆಡಲಾಗುವ ಎಲ್ಲಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಂದ್ಯಗಳ ಟಿವಿ ಮತ್ತು ಡಿಜಿಟಲ್ ಎರಡೂ ಹಕ್ಕುಗಳನ್ನು ಮುಖೇಶ್ ಅಂಬಾನಿ ಒಡೆತನದ ವಿಯಾಕಾಮ್18 ಪಡೆದುಕೊಂಡಿದೆ. ಹಾಗಾಗಿ, ಅಂತರ್‍ರಾಷ್ಟ್ರೀಯ ಮತ್ತು ದೇಶಿ ಎರಡೂ ಪಂದ್ಯಗಳ ಟಿವಿ ಪ್ರಸಾರವನ್ನು ಸ್ಪೋಟ್ರ್ಸ್18 ಮಾಡಲಿದೆ ಮತ್ತು ಜಿಯೋಸಿನೇಮ ಡಿಜಿಟಲ್ ಮಾಧ್ಯಮದಲ್ಲಿ ಎಲ್ಲಾ ಪಂದ್ಯಗಳ ಲೈವ್‍ಸ್ಟ್ರೀಮ್ ಮಾಡಲಿದೆ.

ಐದು ವರ್ಷಗಳ ಅವಧಿಯು 2023 ಸೆಪ್ಟಂಬರ್‍ ನಲ್ಲಿ ಆರಂಭಗೊಂಡು 2028 ಮಾರ್ಚ್‍ನಲ್ಲಿ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಒಟ್ಟು 88 ಪಂದ್ಯಗಳು ನಡೆಯಲಿವೆ (ಈ ಸಂಖ್ಯೆ 102ಕ್ಕೆ ವಿಸ್ತರಿಸುವ ಸಾಧ್ಯತೆಯೂ ಇದೆ). ಈ ಪೈಕಿ 25 ಟೆಸ್ಟ್ ಪಂದ್ಯಗಳು, 27 ಏಕದಿನ ಪಂದ್ಯಗಳು ಮತ್ತು 36 ಟಿ20 ಪಂದ್ಯಗಳು.

ಗುರುವಾರ ನಡೆದ ಇ-ಹರಾಜಿನಲ್ಲಿ, ಸೋನಿ ಪಿಕ್ಚರ್ಸ್ ನೆಟ್‍ವರ್ಕ್ ಇಂಡಿಯಾ ಮತ್ತು ಡಿಸ್ನಿ ಸ್ಟಾರ್‍ನಿಂದ ವಿಯಾಕಾಮ್18 ತೀವ್ರ ಪೈಪೋಟಿ ಎದುರಿಸಿತು.

ವರದಿಗಳ ಪ್ರಕಾರ, ವಿಯಾಕಾಮ್18 ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ನಡೆಯುವ 88 ಅಂತರ್‍ರಾಷ್ಟ್ರೀಯ ಪಂದ್ಯಗಳಿಗಾಗಿ ಬಿಸಿಸಿಐಗೆ 5,966.4 ಕೋಟಿ ರೂ. ಮೊತ್ತವನ್ನು ನೀಡಲಿದೆ.

ಇದರೊಂದಿಗೆ, ಇನ್ನು ವಿಯಾಕಾಮ್18 ಸ್ವದೇಶದಲ್ಲಿ ನಡೆಯುವ ಭಾರತ ಕ್ರಿಕೆಟ್ ತಂಡದ ಪಂದ್ಯಗಳು, ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು (ಡಿಜಿಟಲ್), ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳು, ಪ್ಯಾರಿಸ್ ಒಲಿಂಪಿಕ್ಸ್ 2024, 2024ರ ಋತುವಿನಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆಯುವ ಆ ದೇಶದ ಕ್ರಿಕೆಟ್ ತಂಡವನ್ನು ಒಳಗೊಂಡ ಪಂದ್ಯಗಳು, ಟಿ10 ಲೀಗ್, ರೋಡ್ ಸೇಫ್ಟಿ ವಲ್ರ್ಡ್ ಸೀರೀಸ್, ಎಸ್‍ಎ20 ಫ್ರಾಂಚೈಸ್ ಕ್ರಿಕೆಟ್ ಲೀಗ್, ಎನ್‍ಬಿಎ, ಸೀರೀ ಎ, ಲಾ ಲಿಗ, ಲೀಗ್1 ಮತ್ತು ಡೈಮಂಡ್ ಲೀಗ್ ಕ್ರೀಡಾಕೂಟವನ್ನು ಪ್ರಸಾರ ಮಾಡಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News