ಮುಂಬೈ ಜಾಹೀರಾತು ಫಲಕ ಕುಸಿತ ಪ್ರಕರಣ: ಮೃತರ ಸಂಖ್ಯೆ 17ಕ್ಕೆ ಏರಿಕೆ

Update: 2024-05-22 09:36 GMT

PC : PTI

ಮುಂಬೈ: ಮೇ 13ರಂದು ಮುಂಬೈನ ಘಟ್ಕೋಪರ್ ಪ್ರದೇಶದಲ್ಲಿ ನಡೆದಿದ್ದ ಜಾಹೀರಾತು ಫಲಕ ಕುಸಿತ ಘಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ಬುಧವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧೂಳು ಮಿಶ್ರಿತ ಬಿರುಗಾಳಿ ಹಾಗೂ ಅಕಾಲಿಕ ಮಳೆಯಿಂದಾಗಿ ಛೆಡ್ಡಾನಗರ ಪ್ರದೇಶದಲ್ಲಿರುವ ಪೆಟ್ರೋಲ್ ಪಂಪ್ ಒಂದರ ಮೇಲೆ ಜಾಹೀರಾತು ಫಲಕವು ಉರುಳಿ ಬಿದ್ದುದರಿಂದ ಗಾಯಗೊಂಡಿದ್ದ ರಾಜು ಸೋನಾವಾಲಾ (52) ಎಂಬವವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ, ವಾಯು ಸಂಚಾರ ನಿಯಂತ್ರಣ ಪ್ರಧಾನ ವ್ಯವಸ್ಥಾಪಕ ಹಾಗೂ ಅವರ ಪತ್ನಿ ಸೇರಿದಂತೆ ಒಟ್ಟು 16 ಮಂದಿ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರಾಧಿಕಾರಗಳು ಪ್ರಕಟಿಸಿದ್ದವು. 120 ಚದರ ಅಡಿಯ ಜಾಹೀರಾತು ಫಲಕದ ಕುಸಿತದಿಂದ 75 ಮಂದಿ ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News