ಮುಂಬೈ | 62 ಹೋರ್ಡಿಂಗ್‌ಗಳ ಪೈಕಿ 60ಕ್ಕೆ ಸರಕಾರದ ಅನುಮತಿಯೇ ಇಲ್ಲ!

Update: 2024-06-15 16:36 GMT

ಸಾಂದರ್ಭಿಕ ಚಿತ್ರ

 

ಮುಂಬೈ : ಮುಂಬೈಯಲ್ಲಿ ಸ್ಥಾಪಿಸಲಾದ 62 ಹೋರ್ಡಿಂಗ್‌ಗಳ ಪೈಕಿ 60 ಸರಕಾರಿ ಸಂಸ್ಥೆಯಿಂದ ಅಗತ್ಯವಿರುವ ನಿರಾಕ್ಷೇಪಣ ಪತ್ರ (ಎನ್‌ಒಸಿ)ವನ್ನು ಹೊಂದಿಲ್ಲ ಎಂದು ಮಹಾರಾಷ್ಟ್ರ ವಸತಿ ಹಾಗೂ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಎಂಎಚ್‌ಎಡಿಎ) ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ.

ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ನಿರ್ದೇಶನದ ಹಿನ್ನೆಲೆಯಲ್ಲಿ ಈ ಸಮೀಕ್ಷೆ ನಡೆಸಲಾಗಿದೆ ಎಂದು ಶುಕ್ರವಾರ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಎಂಎಚ್‌ಎಡಿಎ ಬಹಿರಂಗಪಡಿಸಿದೆ.

ಮೇ 13ರಂದು ಘಾಟ್ಕೋಪರ್‌ನಲ್ಲಿ ಹೋರ್ಡಿಂಗ್ ಕುಸಿದು 17 ಮಂದಿ ಸಾವನ್ನಪ್ಪಿದ ಹಾಗೂ 70 ಮಂದಿ ಗಾಯಗೊಂಡ ಘಟನೆ ಬಳಿಕ ಈ ಬೆಳವಣಿಗೆ ನಡೆದಿದೆ. ಕಳೆದ ಎರಡು ತಿಂಗಳಿಂದ ಎಂಎಚ್‌ಎಡಿಎ ಅನಧಿಕೃತ ಹೋರ್ಡಿಂಗ್‌ನ ಮಾಲಕರಿಗೆ ನೋಟಿಸು ಜಾರಿಗೊಳಿಸಿದೆ ಹಾಗೂ ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿದೆ.

ನಿಯಮಗಳನ್ನು ಅನುಸರಿಸದೇ ಇರುವುದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ)ನ ನೆರವಿನೊಂದಿಗೆ ಈ ರಚನೆಗಳನ್ನು ತೆರವುಗೊಳಿಸುವುದಕ್ಕೆ ಕಾರಣವಾಗಬಹುದು ಎಂದು ಎಂಎಚ್‌ಎಡಿಎ ಎಚ್ಚರಿಸಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News