ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲು 10 ಸ್ಥಳಗಳ ಹೆಸರುಗಳು ಎಎಸ್‌ಐಗೆ ರವಾನೆ

Update: 2024-09-29 14:46 GMT

ಗಣಿ ಕಾರ್ಯದರ್ಶಿ ವಿ.ಎಲ್.ಕಾಂತಾ ರಾವ್ | PC : X

ಹೊಸದಿಲ್ಲಿ : ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲು ಭಾರತೀಯ ಪುರಾತತ್ವ ಸರ್ವೆ (ಎಎಸ್‌ಐ)ಗೆ ಕಳುಹಿಸಲಾಗಿರುವ ಹತ್ತು ಸ್ಥಳಗಳ ಹೆಸರುಗಳು ಪರಿಶೀಲನೆಯಲ್ಲಿವೆ ಎಂದು ಸರಕಾರವು ತಿಳಿಸಿದೆ.

ಸುಮಾರು 100 ಭೂ-ಪಾರಂಪರಿಕ ಸ್ಥಳಗಳಿದ್ದು,ಈ ಪೈಕಿ 32 ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕಗಳಾಗಿ ಗುರುತಿಸಲ್ಪಟ್ಟಿವೆ.

ಪುರಾತತ್ವ ಸ್ಥಳಗಳಿಗೆ ಇರುವಂತೆ ಭೂವೈಜ್ಞಾನಿಕ ತಾಣಗಳ ಸಂರಕ್ಷಣೆಗೆ ಯಾವುದೇ ಕಾನೂನು ಇಲ್ಲ.

ಆದರೆ ಭಾರತದ ಭೂವೈಜ್ಞಾನಿಕ ಪರಂಪರೆಯನ್ನು ರಕ್ಷಿಸುವ ಉದ್ದೇಶದ ಭೂ ಪರಂಪರೆ ತಾಣಗಳು ಮತ್ತು ಭೂ-ಅವಶೇಷಗಳ ಮಸೂದೆ,2022 ಪ್ರಕ್ರಿಯೆಯಡಿ ಇದೆ ಎಂದು ಗಣಿ ಕಾರ್ಯದರ್ಶಿ ವಿ.ಎಲ್.ಕಾಂತಾ ರಾವ್ ತಿಳಿಸಿದರು.

ವಿಶ್ವಾದ್ಯಂತ ಸುಮಾರು 1,200 ವಿಶ್ವ ಪರಂಪರೆ ತಾಣಗಳಿದ್ದು,ಈ ಪೈಕಿ 42 ಭಾರತದಲ್ಲಿವೆ ಮತ್ತು ಇವುಗಳಲ್ಲಿ ಯಾವುದೂ ಭೂವೈಜ್ಞಾನಿಕ ತಾಣವಲ್ಲ ಎಂದು ದಿಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವ್ ಹೇಳಿದರು. ಭಾರತದಲ್ಲಿ ಮುಂಬರುವ ವರ್ಷಗಳಲ್ಲಿ ಕನಿಷ್ಠ ಎರಡು ಜಿಯೊಪಾರ್ಕ್‌ಗಳನ್ನು ಗುರುತಿಸುವ ಅಗತ್ಯಕ್ಕೆ ಅವರು ಒತ್ತು ನೀಡಿದರು.

ಭಾರತವು ಮಹಾರಾಷ್ಟ್ರದ ಲೋನಾರ್ ಕುಳಿ,ಮಧ್ಯಪ್ರದೇಶದಲ್ಲಿ ಭೇಡಾಘಾಟ್ ಮತ್ತು ಆಂಧ್ರಪ್ರದೇಶದಲ್ಲಿ ಗಂಡಿಕೋಟ ಪ್ರಪಾತಗಳಂತಹ ಅತ್ಯುತ್ತಮ ಭೂ-ಪರಂಪರೆ ತಾಣಗಳನ್ನು ಹೊಂದಿದೆ,ಆದರೆ ಇವು ಹೆಚ್ಚಾಗಿ ಪ್ರವಾಸೋದ್ಯಮ ತಾಣಗಳಾಗಿ ಹೆಸರಾಗಿದ್ದು,ಅವುಗಳ ಭೂವೈಜ್ಞಾನಿಕ ಮಹತ್ವವು ಜನರಿಗೆ ತಿಳಿದಿಲ್ಲ ಎಂದೂ ರಾವ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News