ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ | ಪ್ರತಿಪಕ್ಷ ನಾಯಕರಿಗೆ ಇನ್ನೂ ಆಹ್ವಾನ ಸಿಕ್ಕಿಲ್ಲ: ಕಾಂಗ್ರೆಸ್

Update: 2024-06-08 15:27 GMT

ಜೈರಾಮ್ ರಮೇಶ್ |  PC : PTI 

ಹೊಸದಿಲ್ಲಿ : ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಹಾಜರಾಗಬೇಕೇ ಎಂಬ ನಿರ್ಧಾರವನ್ನು INDIA ಮೈತ್ರಿಕೂಟವು ಪರಸ್ಪರ ಸಮಾಲೋಚನೆಯ ಮೂಲಕ ತೆಗೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.

ಪ್ರಮಾಣವಚನ ಕಾರ್ಯಕ್ರಮವು ರವಿವಾರ ಸಂಜೆ 7:15ಕ್ಕೆ ನಡೆಯಲಿದೆ.

‘‘ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹಾಜರಾಗುವುದಕ್ಕೆ ಸಂಬಂಧಿಸಿದ ನಿರ್ಧಾರವನ್ನು INDIA ಮೈತ್ರಿಕೂಟವು ಸಾಮೂಹಿಕವಾಗಿ ತೆಗೆದುಕೊಳ್ಳಲಿದೆ’’ ಎಂದು ಕಾಂಗ್ರೆಸ್ ಕ್ರಿಯಾ ಸಮಿತಿ ಸಭೆಯ ಬಳಿಕ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದರು.

ಈ ನಡುವೆ, ಪ್ರಧಾನಿ ನರೇಂದ್ರೆ ಮೋದಿ ಮತ್ತು ಬಿಜೆಪಿಯ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ನ ಹಿರಿಯ ನಾಯಕ ಜೈರಾಮ್ ರಮೇಶ್, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕೇವಲ ಅಂತರರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗಿದೆ, ಪ್ರತಿಪಕ್ಷ ನಾಯಕರಿಗೆ ಇನ್ನು ಆಹ್ವಾನ ನೀಡಲಾಗಿಲ್ಲ ಎಂದು ಹೇಳಿದ್ದಾರೆ.

‘‘ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ನಾಯಕರನ್ನು ಮಾತ್ರ ಆಹ್ವಾನಿಸಲಾಗಿದೆ. ನಮ್ಮ ನಾಯಕರಿಗೆ ಇನ್ನೂ ಆಹ್ವಾನ ಸಿಕ್ಕಿಲ್ಲ. ನಮ್ಮ INDIA ಮೈತ್ರಿಕೂಟದ ನಾಯಕರಿಗೆ ಆಹ್ವಾನ ಸಿಕ್ಕಿದರೆ, ಆಗ ನಾವು ಅದರ ಬಗ್ಗೆ ಯೋಚಿಸುತ್ತೇವೆ’’ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News