ವಿಜಯದಶಮಿ, ದೀಪಾವಳಿ ವೇಳೆಗೆ ನೂತನ ಸಹಕಾರಿ ನೀತಿ: ಅಮಿತ್ ಶಾ

Update: 2023-07-25 16:33 GMT

Photo: ಅಮಿತ್ ಶಾ | PTI 

ಹೊಸದಿಲ್ಲಿ: ವಿಜಯದಶಮಿ ಅಥವಾ ದೀಪಾವಳಿ ವೇಳೆಗೆ ನೂತನ ಸಹಕಾರಿ ನೀತಿಯನ್ನು ಘೋಷಿಸುವ ಯೋಜನೆಯನ್ನು ಸರಕಾರ ಹೊಂದಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಪ್ರಕಟಿಸಿದ್ದಾರೆ.

ಲೋಕಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಸಹಕಾರ ಕ್ಷೇತ್ರದ ಬೆಳವಣಿಗೆಗೆ ಒತ್ತು ನೀಡುವ ಮತ್ತು ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಅದು ವಹಿಸಿರುವ ಪಾತ್ರವನ್ನು ಹೆಚ್ಚಿಸುವ ಗುರಿಯನ್ನು ನೂತನ ಸಹಕಾರಿ ಹೊಂದಿರುತ್ತದೆ ಎಂದು ಅವರು ಹೇಳಿದರು.

ಲಕ್ಷಾಂತರ ಜನರ ಬದುಕಿನ ಮೇಲೆ ಧನಾತ್ಮಕ ಪರಿಣಾಮ ಬೀರುವ ಸುಧಾರಣೆಗಳ ಜಾರಿಯನ್ನು ತ್ವರಿತಗೊಳಿಸುವ ಸರಕಾರದ ಬದ್ಧತೆಯನ್ನು ನೂತನ ಸಹಕಾರ ನೀತಿಯು ಒಳಗೊಂಡಿರುತ್ತದೆ ಎಂದು ಅಮಿತ್ ಶಾ ಹೇಳಿದರು.

ಜನರ ಸಾಲ ಪಡೆಯುವ ಅವಕಾಶವನ್ನು ಹೆಚ್ಚಿಸುವುದು, ತಾಂತ್ರಿಕ ನೆರವು ಮತ್ತು ತರಬೇತಿ, ಮೂಲಸೌಕರ್ಯ ಅಭಿವೃದ್ಧಿ, ಹೊಸತನಕ್ಕೆ ಉತ್ತೇಜನ ನೀಡುವುದು, ಆಡಳಿತವನ್ನು ಬಲಪಡಿಸುವುದು, ಮಾರುಕಟ್ಟೆಗಳನ್ನು ಪರಸ್ಪರ ಸಂಪರ್ಕಿಸುವುದು ಮುಂತಾದ ವಿವಿಧ ಉದ್ದೇಶಗಳನ್ನು ನೂತನ ಸಹಕಾರ ನೀತಿ ಹೊಂದಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News